ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾದ ಹಿನ್ನಲೆಯಲ್ಲಿ
ಪ್ರಕರಣವನ್ನು ಮೈಸೂರು ಖಾಕಿಪಡೆ ಗಂಭೀರವಾಗಿ ಪರಿಗಣಿಸಿದೆ.
ಹಾಗಾಗಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಖುದ್ದಾಗಿ ಫೀಲ್ಡ್ ಗೆ ಇಳಿದಿದ್ದಾರೆ,
ಭಾನುವಾರ ಇಡೀ ದಿನ ಮೈಸೂರು ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆದಿದೆ.
ನೆನ್ನೆ ರಾತ್ರಿ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆದಿದ್ದು, ದಾಳಿಯಲ್ಲಿ
26 ಜನ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ.ಒಬ್ಬ ಮಾರಾಟಗಾರನನ್ನು ವಶಕ್ಕೆ ಪಡೆಯಲಾಗಿದೆ.
ಮಂಡಿ ಮೊಹಲ್ಲಾ, ಉದಯಗಿರಿ, ಎನ್ ಆರ್ ಮೊಹಲ್ಲಾ, ನಜರ್ ಬಾದ್, ಕೆ ಆರ್ ಮೊಹಲ್ಲಾ ಸೇರಿ ಹಲವು ಕಡೆ ಏಕ ಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.

ಡಿಸಿಪಿಗಳು ಎಸಿಪಿಗಳು ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,59 ಗೋದಾಮುಗಳಲ್ಲಿ ತಪಾಸಣೆ ಮಾಡಲಾಗಿದೆ.ಜತೆಗೆ
ಹಾಸ್ಟೆಲ್‌ಗಳು ಸೇರಿ ಹಲವು ಕಡೆ ತಪಾಸಣೆ ಮಾಡಿದ್ದಾರೆ.
ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ
35 ಜನರ ವಿಚಾರಣೆ ನಡೆಸಲಾಗಿದೆ.
ಸೋಮವಾರ ಕೂಡಾ ಕಾರ್ಯಾಚರಣೆ ಮುಂದುವರಿದಿದೆ.
ಅಮಾನತು: ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 50 ಕ್ಕೂ ಹೆಚ್ಚು ಕೆಜಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್.ಆರ್.ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲಕ್ಷ್ಮಿಕಾಂತ್ ತಳವಾರ್ ಅವರನ್ನ ಅಮಾನತುಪಡಿಸಲಾಗಿದೆ.
ಅಡಳಿತಾತ್ಮಕ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.
ಲಕ್ಷ್ಮಿಕಾಂತ್ ತಳವಾರ್ ಅವರ ಜಾಗಕ್ಕೆ ಸಿಸಿಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್ ಅವರನ್ನ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.