ಮೈಸೂರು: ಮೈಸೂರಿನ ಹಿರಿಯ ಸಂಸ್ಕೃತಿ ಪೋಷಕರು ಹಾಗೂ ಸಮಾಜ ಸೇವಕರಾದ ಡಾ ರಘುರಾಂ ಕೆ ವಾಜಪೇಯಿ ಅವರ 70ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಅವರಿಗೆ ಶುಭ ಕೋರಲಾಯಿತು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಶುಭ ಹಾರಿಸಲಾಯಿತು.
ವಾಜಪೇಯಿ ಅವರು ಮೈಸೂರು ಕಂಡಂತಹ ಅತ್ಯದ್ಭುತ ವಿಚಾರವಂತರು,ಮೈಸೂರಿನಲ್ಲಿ ಯಾವುದೇ ಸಭೆ ಸಮಾರಂಭಗಳು ನಡೆದರೂ, ಈ ಸಮಾರಂಭಗಳಲ್ಲಿ ಯಾವುದೇ ವಿಚಾರವಾಗಿ ಲೀಲಾಜಾಲವಾಗಿ ಮಾತನಾಡುತ್ತಾರೆ ಎಂದು ತೇಜೇಶ್ ಲೋಕೇಶ್ ಗೌಡ ಮತ್ತಿತರರು ಬಣ್ಣಿಸಿದರು.
ನಮ್ಮ ಮೈಸೂರಿನ ಗೂಗಲ್ ಎಂದೇ ಹೇಳಬಹುದು. ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡಿರುವ ಇವರು ನಮ್ಮ ನಾಡಿನ ಸಂಸ್ಕೃತಿ ಪೋಷಕರು ಹಾಗೂ ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ತೇಜೇಶ್ ಲೋಕೇಶ್ ಗೌಡ, ಗೋಲ್ಡನ್ ಸುರೇಶ್, ಪ್ರಭಾಕರ್, ಹನುಮಂತಯ್ಯ, ಜ್ಯೋತಿ ಅವರುಗಳು ರಘು ರಾಮ್ ವಾಜಪೇಯಿ ದಂಪತಿಗಳಿಗೆ ಶಾಲು, ಹಾರ ಹಾಕಿ, ಕಿರು ಕೊಡುಗೆ ನೀಡಿ ಶುಭ ಹಾರೈಸಿದರು.