ಮೈಸೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಮೈಸೂರಿನ ಹೆಬ್ಬಾಳ ಸಂಕ್ರಾಂತಿ ವೃತ್ತದ ಲ್ಲಿರುವ EURO KIDS ಶಾಲೆಯಲ್ಲಿ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ವತಿಯಿಂದ ಶಿಕ್ಷಕರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉತ್ತಮ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉತ್ತಮ ಶಿಕ್ಷಣ ರತ್ನ ಪ್ರಶಸ್ತಿ 2025 ಪ್ರಶಸ್ತಿ ಪತ್ರವನ್ನು ವಿತರಿಸಿ ಗೌರವಿಸಲಾಯಿತು.
ಪಂಚಾಯತ್ ಗ್ರಾಮಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಅಧ್ಯಕ್ಷ ಯಾದವ ಹರೀಶ್ ಹೆಚ್ ಎ , ಕಾರ್ಯದರ್ಶಿ ಪಲ್ಲವಿ ಹೆಚ್, ಸಂಚಾಲಕ ರಕ್ತದಾನಿ ಮಂಜು, ಸಂಘಟನಾ ಕಾರ್ಯದರ್ಶಿ ಚೈತ್ರಾ ಹೆಚ್ ಆರ್ ಗೌಡ, ಗೌರವಾಧ್ಯಕ್ಷೆ ಸವಿತಾ ಎ ಆರ್, ಮತ್ತು ಸಹಯೋಜಕರಾದ ಪಲ್ಲವಿ ಮತ್ತು EURO KIDS ಶಾಲೆಯ ಮುಖ್ಯಸ್ಥೆ ಅಂಬಿಕಾ, ಶಾಲೆಯ ಸಿಇಒ ಆಶಿಕಾ ಹಾಗೂ ಎಲ್ಲಾ ಹಿರಿಯ ಶಿಕ್ಷಕರು ಪಾಲ್ಗೊಂಡಿದ್ದರು.