ಮೈಸೂರು,ಏ.1: ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಡ್ರಾಗರ್ ನಿಂದ ಇರಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಮೇಶ್ ಎಂಬುವರು ಡ್ರಾಗರ್ ನಿಂದ ಇರಿತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಭಂಧ ಅರ್ಜುನ್ ಎಂಬಾತನನ್ನ ಪೊಲೀಸರು ಬಂಧಿಸಿದ್ದು,ಇನ್ನು ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಯುಗಾದಿ ಹಬ್ಬದ ದಿನದಂದು ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಗತ್ ಬಾರ್ ಬಳಿ ಜೂಜಾಟಕ್ಕೆ ಸಿದ್ದತೆ ಆಗಿತ್ತು.ಈ ವೇಳೆ ಇಬ್ಬರು ಯುವಕರ ನಡುವೆ ಆಟೋ ಮಾರಾಟದಿಂದ ಬಂದ ಹಣದ ಬಗ್ಗೆ ಜಗಳ ವಾಗಿದೆ,ಆಗ ಅಲ್ಲಿಗೆ ಬಂದ ಉಮೇಶ್ ಜಗಳ ಬಿಡಿಸಲು ಯತ್ನಿಸಿದ್ದಾರೆ.
ಆದರೆ ಯುವಕರು ಡ್ರಾಗರ್ ನಿಂದ ಉಮೇಶ್ ಕುತ್ತಿಗೆಗೆ ಇರಿದಿದ್ದಾರೆ.ತೀವ್ರ ಗಾಯಗೊಂಡಿದ್ದ ಉಮೇಶ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ರವಿ,ಗಿರೀಶ್ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಅರ್ಜುನ್ ಎಂಬಾತನನ್ನ ಬಂಧಿಸಿದ್ದಾರೆ.