ಅರ್ಥಪೂರ್ಣ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ

ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರೀಯ ಪ್ರಶಸ್ತಿಗಳ ವಿಜೇತ ಪುಟ್ಟಣ್ಣ ಕಣಗಾಲ್ ಅವರ 91ನೇ ಜನ್ಮದಿನೋತ್ಸವದ ಅಂಗವಾಗಿ ಪರಿವರ್ತನಂ ಟ್ರಸ್ಟ್ ಹಮ್ಮಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ಪುಟ್ಟಣ್ಣ ಕಣಗಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು,

ಈ‌ ವೇಳೆ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ, ಪುಟ್ಟಣ್ಣ ಕಣಗಾಲರ ಚಿತ್ರಗಳು ಕುಟುಂಬ ಪ್ರಧಾನವಾದವು, ಸಮಾಜಿಕ ಸಂದೇಶದ ಜೊತೆಯಲ್ಲೆ ಅವರ ನಿರ್ದೇಶನದಲ್ಲಿ ಮಹಿಳಾ ಪ್ರಧಾನಚಿತ್ರಗಳು, ಮೈಸೂರು ದಸರಾ, ಕೊಡಗಿನ ಕಾವೇರಿ, ಕನ್ಯಾಕುಮಾರಿ, ಮಾನಸ ಸರೋವರ, ಚಿತ್ರದುರ್ಗದ ಕಲ್ಲಿನ ಕೋಟೆ, ಸೇರಿದಂತೆ ಹಲಾವರು ಇತಿಹಾಸ ಬಿಂಬಿಸುವ ಸ್ಥಳಗಳನ್ನ ಜನರಿಗೆ ಪ್ರಚಾರಪಡಿಸುತ್ತಿದ್ದರು ಎಂದು ಹೇಳಿದರು.

ಸಮಾಜಸೇವಕ ಕೆ. ರಘುರಂ ವಾಜಪೇಯಿ ಅವರು ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಬಿ.ಆರ್ ಪಂತಲು ಅವರೊಂದಿಗೆ ಚಿತ್ರನಿರ್ದೇಶನದಲ್ಲಿ ಕೆಲಸ ಮಾಡಿದ ಕಣಗಾಲ್ ಗ್ರಾಮದ ಎಸ್.ಆರ್ ಪುಟ್ಟಣ್ಣ ಕಣಗಾಲ್ ಕಾದಂಬರಿ ಆಧಾರಿತ ಚಿತ್ರವನ್ನು ಹೆಚ್ಚಾಗಿ ನಿರ್ದೇಶಿಸಿದರು ಎಂದು ತಿಳಿಸಿದರು.

ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಕಲ್ಪನಾ, ಆರತಿ, ವಜ್ರಮುನಿ, ಶ್ರೀನಾಥ್ ಸೇರಿದಂತೆ ಹೊಸಮುಖದ ಕಲಾವಿದರನ್ನ ಮುಖ್ಯವಾಹಿನಿಗೆ ಪುಟ್ಟಣ್ಣ ತಂದರು. ನಾಗರಹಾವು ಚಿತ್ರದ ಸಮಾಜದಲ್ಲಿ ಸಂಸ್ಕಾರ ತೋರಿಸುವ ಗುರು ಶಿಷ್ಯರ ಪಾತ್ರ ಇಂದಿಗೂ ಜನಮನದಲ್ಲಿದೆ,ಪುಟ್ಟಣ್ಣ ಅವರ ಕ್ರಿಯಾಶೀಲತೆಯಿಂದ ಚಿತ್ರ ನಿರ್ದೇಶಕರಿಗೆ ಮನ್ನಣೆ ಲಭಿಸಿತು ಎಂದು ತಿಳಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ಮಾತನಾಡಿ ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಕನ್ನಡಚಿತ್ರರಂಗ ಅತ್ಯುತ್ತಮ ಚಿತ್ರ ನಿರ್ದೇಶಕ ಎಂದು ಪ್ರತಿವರ್ಷ ಪ್ರಶಸ್ತಿ ನೀಡುತ್ತಾರೆ, ಅದರ ಜೊತೆಯಲ್ಲೆ ಚಿತ್ರನಿರ್ದೇಶಕರ ಕಲಿಕಾ ಸಂಶೋಧನಾ ಘಟಕವನ್ನ ನಿರ್ಮಿಸಿದರೆ ಸಾಕಷ್ಟು ಯುವಕಲಾವಿದರಿಗೆ ಸ್ಪೂರ್ತಿ ದೊರೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್ ,ಆಲನಹಳ್ಳಿ
ಎಂ ಎನ್ ಚೇತನ್ ಗೌಡ,
ಮತ್ತಿತರರು ಪಾಲ್ಗೊಂಡಿದ್ದರು.