ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಸ್ ಆರ್ ಪುಟ್ಟಣ್ಣ ಕಣಗಾಲ್ ಜನ್ಮದಿನೋತ್ಸವವನ್ನು ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ವೃತ್ತದಲ್ಲಿ
ಪುಟ್ಟಣ್ಣ ನೆನಪಿನoಗಳ ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರಾದ ಆರ್ ರಘು ಕೌಟಿಲ್ಯ, ಪೌರಾಣಿಕ ನಾಟಕಗಳು ಸಂಗೀತ ಕಾರ್ಯಕ್ರಮಗಳಿಗೆ ಅತಿ ಹೆಚ್ಚು ಪ್ರೋತ್ಸಾಹ ಜನಮನ್ನಣೆಯಿದ್ದ ಕಾಲಘಟ್ಟದಲ್ಲಿ ಕೌಟುಂಬಿಕ ಚಿತ್ರಗಳು ಮತ್ತು ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನ ಸರಿಸಾಟಿಯಾಗಿ ನಿರ್ದೇಶಿಸಿ 3ದಿನಗಳ ಮುಂಗಡವಾಗಿ ಸರತಿ ಸಾಲಿನಲ್ಲಿ ಟಿಕೆಟ್ ಪಡೆಯಲು ಚಿತ್ರಮಂದಿರಕ್ಕೆ ಕಲಾಪ್ರೇಕ್ಷಕರನ್ನ ಆಕರ್ಷಿಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಚಿತ್ರಗಳು ಎಂದು ಬಣ್ಣಿಸಿದರು.
ನಾಗರಹಾವು ಚಿತ್ರದಲ್ಲಿ ಬರುವ ಪಾತ್ರಗಳು ಒನಕೆ ಒಬ್ಬವ್ವ ಇವತ್ತಿಗೂ ಯುವಪೀಳಿಗೆಯಲ್ಲಿ ದೇಶಪ್ರೇಮವನ್ನ ಹೆಚ್ಚಿಸುತ್ತಿದೆ, ಚಾಮಯ್ಯ ಮೇಷ್ಟ್ರು ರಾಮಾಚಾರಿ ಪಾತ್ರಗಳು ಗುರುಶಿಷ್ಯನ ಭಾಂದವ್ಯ ಗೌರವವನ್ನ ಹೆಚ್ಚಿಸುತ್ತದೆ, ಸಮಾಜದಲ್ಲಿ ವಸ್ತುಸ್ಥಿತಿಯನ್ನ ತೋರಿಸಿ ಜನರನ್ನ ಎಚ್ಚರಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು.
ಚಿತ್ರದುರ್ಗದ ಕಲ್ಲಿನ ಕೋಟೆ, ಕನ್ಯಾಕುಮಾರಿ ವೀವೇಕ ಸ್ಮಾರಕ, ಕೊಡಗಿನ ಕಾವೇರಿ, ಶ್ರೀ ಚಾಮುಂಡೇಶ್ವರಿ, ಮೈಸೂರು ದಸರಾ ಸೇರಿದಂತೆ ಪ್ರತಿಯೊಂದು ಚಿತ್ರದ ಹಾಡುಗಳು ಸಹ ಪ್ರವಾಸಿ ತಾಣದ ಜನಪ್ರಿಯತೆ ತಂದುಕೊಟ್ಟಿತು.
ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗುವ ಸಂಧರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನ ನಾಮಕರಣ ಮಾಡಿ ಸ್ಮರಿಸಬೇಕು ಮತ್ತು ಪಿರಿಯಾಪಟ್ಟಣದ ಕಣಗಾಲ್ ನಲ್ಲಿರುವ ಅವರ ಮನೆಯನ್ನ ಸ್ಮಾರಕವಾಗಿ ಉಳಿಸಿಕೊಳ್ಳಬೇಕು ಎಂದು ರಘು ಕೌಟಿಲ್ಯ ಒತ್ತಾಯಿಸಿದರು.
ಹಿರಿಯ ಸಮಾಜಸೇವಕ ಡಾ.ಕೆ ರಘುರಾಂ ವಾಜಪೇಯಿ ಮಾತನಾಡಿ
ಕಲಾವಿದರ ತವರೂರು ಮೈಸೂರು ಚಿತ್ರರಂಗಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ಅವರ ಪಾತ್ರ ಪ್ರಮುಖವಾದದ್ದು ಎಂದು ಬಣ್ಣಿಸಿದರು.
ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಸೇರಿದಂತೆ ಅನೇಕರು ಅತ್ಯುತ್ತಮ ನಟರಾಗಿ ಹೊಮ್ಮಿದರು, ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬಪ್ರಧಾನವಾಗಿದ್ದ್ದವು, ಹಿಂದೂಸ್ಥಾನವೂ ಎಂದು ಮರೆಯದ ಭಾರತರತ್ನವೂ ನೀನಾಗು ಗೀತೆ ಸಹಸ್ರಾರು ಯುವಕರನ್ನ ವಿವಿಧಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಪ್ರೇರೇಪಿಸಿತು ಎಂದು ಹೇಳಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವರಹಳ್ಳಿ ಎಂ ರಾಮಕೃಷ್ಣ,ಗಿರೀಶ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ವಿನಯ್ ಕಣಗಾಲ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ರಂಗನಾಥ್, ಧರ್ಮೇಂದ್ರ, ಸುಚೀಂದ್ರ,ಕಲಾವಿದರಾದ ನಾಗೇಂದ್ರ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.
