ಮೈಸೂರು, ಮಾ.5: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್‌ನ ಮೈಸೂರು ಜಿಲ್ಲಾ ಮತ್ತು ತಾಲೂಕು ಘಟಕದ ಕಚೇರಿಯನ್ನು ಉದ್ಘಾಟಿಸಲಾಯಿತು.
ಮೈಸೂರಿನ ವಿದ್ಯಾರಣ್ಯಪುರಂನ ಅಂದಾನಿ ವೃತ್ತದ ಸಮೀಪದಲ್ಲಿ ಆರಂಭಿ ಸಿರುವ ಕಚೇರಿಯ ಉದ್ಘಾಟನಾ ಸಮಾ ರಂಭದಲ್ಲಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮ್ ಪ್ರಸಾದ್, ಪುರೋಹಿತರು ಎಂದರೆ ಹಿಂದೆ ಪುರದ ಹಿತ ಕಾಯು ವವರು ಎನ್ನುತ್ತಿದ್ದರು. ಈ ನಿಟ್ಟಿನಲ್ಲಿ ಒಕ್ಕೂಟ ಹೆಜ್ಜೆ ಇಡಬೇಕು ಪುರೋ ಹಿತರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಕು ಎಂದು ಸಲಹೆ ನೀಡಿದರು.
ಅಭ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಧಾರ್ಮಿಕ ವಿಧಿವಿಧಾನ, ಶಾಸ್ತ್ರಗಳ ಕುರಿತಂತೆ ಜ್ಞಾನ ವೃದ್ಧಿಸಿಕೊಳ್ಳಬೇಕು ಇದರಿಂದ ನಮ್ಮ ಸಂಸ್ಕೃತಿಯ ಬಗ್ಗೆ ಜ್ಞಾನ ಮತ್ತು ಆಚಾರ-ವಿಚಾರಗಳಲ್ಲಿ ಪುರೋಹಿತ ವರ್ಗ ಪರಿಣತಿ ಸಾಧಿಸಲು ಸಾಧ್ಯವಾ ಗಲಿದೆ ಎಂದು ತಿಳಿಸಿದರು.
ಹತ್ತಾರು ಕಾರ್ಯಕ್ರಮ ಗಳ ಮೂಲಕ ಪುರೋಹಿತ ಸಮು ದಾಯ ಸಂಘಟನೆಯಾಗಬೇಕು. ಒಕ್ಕೂಟದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯೋಜನೆ ಮಾಡ ಬೇಕು. ಅದಕ್ಕಾಗಿ ಪ್ರಾಯೋಜಕತ್ವ ಪಡೆಯುವ ಅವಕಾಶ ಬಳಸಿಕೊಳ್ಳಬೇಕು ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಸಂಘಟನೆ ಮೂಲಕ
ಪಡೆಯಲುl ಮುಂದಾಗಬೇಕು ಎಂದು ಹೇಳಿದರು.
ಪುರೋಹಿತರನ್ನು ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ, ಸದಸ್ಯತ್ವ ಮಾಡಿಸಿ ಸಂಘಟನೆ ಮಾಡಬೇಕು. ಸದಸ್ಯತ್ವ ಮಾಡಿಕೊಳ್ಳುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಕರಪತ್ರದ ಮೂಲಕ ಮನವರಿಕೆ ಮಾಡಿಕೊಡಬೇಕು
ಎಂದು ಸಲಹೆ ನೀಡಿದರು.
ದಾನಿಗಳ ಮೂಲಕ ಸಂಕಷ್ಟದಲ್ಲಿರುವ ಪುರೋಹಿತ ಕುಟುಂಬಗಳಿಗೆ ನೆರವಾ ಗಲು ಒಕ್ಕೂಟ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಪರಿಪಾಠ
ಬೆಳೆಸಿಕೊಳ್ಳಬೇಕು. ಒಕ್ಕೂಟದ ಪದಾಧಿ ಕಾರಿಗಳು ಸಮರ್ಪಣಾ ಮನೋಭಾವ ದಿಂದ ತೊಡಗಿಸಿಕೊಂಡರೆ ಮೈಸೂರು ಭಾಗದ ಪುರೋಹಿತರು ಸಂಘಟನೆಯಾ ಗಲು ಸಾಧ್ಯವಿದೆ. ಕೆಲಸ ಮಾಡಿದರೆ ಯಶಸ್ಸು ಲಭಿಸಲಿದ್ದು ಪುರೋಹಿತರ ಒಕ್ಕೂಟವೆಂದರೆ ಜನ ಬಯಸುವಂತೆ ಆಗಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ಪುರೋಹಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಇಂತಹ ಸಂಘಟನೆ ನಿಜಕ್ಕೂ ಅಗತ್ಯವಿತ್ತು. ಮಂಗಳ ಕಾರ್ಯಗಳ ನೇತೃತ್ವ ವಹಿಸು ವಲ್ಲಿ ಪುರೋಹಿತರ ಪಾತ್ರ ಸಮಾಜದಲ್ಲಿ ಮಹತ್ವ ಹೊಂದಿದೆ ಎಂದು ತಿಳಿಸಿದರು.
ಇದೇ ವೇಳೆ ಜೀವ ವಿಮೆ ಪತ್ರಗಳನ್ನು ಒಕ್ಕೂಟದ ಸದಸ್ಯರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.

ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸತೀಶ್ ಸಿಂಹ, ಜಿಲ್ಲಾ ಮತ್ತ ತಾಲೂಕು ಘಟಕದ ಅಧ್ಯಕ ಸಂತೋಷ್ ಕುಮಾರ್ ದೇಶಿಕ್, ಗೌರವಾ ಧ್ಯಕ್ಷ ಎನ್.ಲಕ್ಷ್ಮೀಶ,
ಉಪಾಧ್ಯಕ್ಷ ವಿದ್ವಾನ್ ಮಧುಶಂಕರ್ ಭಟ್, ಕಾರ್ಯದರ್ಶಿ ರವಿಶಂಕರ್, ಖಜಾಂಜಿ
ಮನೋಹರ್, ಪದಾಧಿಕಾರಿಗಳಾದ ಗಣೇಶ್ ಎಂ ವಿ, ಗುರುರಾಜ್, ವೆಂಕಟೇಶ್, ವಿಜಯ ವಿಠಲಾಚಾರ್ಯ, ರಾಜಣ್ಣ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.