ಚನ್ನರಾಯಪಟ್ಟಣದಲ್ಲಿ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ

Spread the love

ಚನ್ನರಾಯಪಟ್ಟಣ : ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಪಟ್ಟಣದ ಮೈಸೂರು ರಸ್ತೆಯ ಮಹಾಲಕ್ಷ್ಮಿ ಲೇಔಟ್ ನ ಟಿವಿಎಸ್ ಶೋರೂಮ್ ಮುಂಭಾಗ ಅರ್ಥಪೂರ್ಣವಾಗಿ
ಆಚರಿಸಲಾಯಿತು.

ಪುನೀತ್ ರಾಜಕುಮಾರ್ ಅವರ ಅಭಿಮಾನಿ ಹಾಗೂ ಜನಸೇವಕ ಟಿವಿಎಸ್ ಶಶಿಧರ್ ಅವರು ಆಯೋಜಿಸಿದ್ದ ಈ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಪುನೀತ್ ಅವರು ಸದ್ದಿಲ್ಲದಂತೆ ಎಲೆಮರೆಕಾಯಿಯಂತೆ ಮಾಡಿದ ಸೇವೆಯನ್ನು ಕೊಂಡಾಡಿದರು.

ಪುನೀತ್ ರವರ ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಶಿಧರ್ ಅವರು ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಟೈಮ್ಸ್ ಗಂಗಾಧರ್, ಹಗಲಿರಳು ಸೇವೆ ಮಾಡಿದ ಆಂಬುಲೆನ್ಸ್ ಚಾಲಕರು, ಕೆಇಬಿ ಲೈನ್ ಮ್ಯಾನ್ ಗಳು ಹಾಗೂ ಮಹಿಳಾ ಆಟೋ ಚಾಲಕಿ ಅವರನ್ನು ಗೌರವಿಸಿ ಹಣ್ಣಿನ ಗಿಡಗಳ ನೀಡುವ ಮೂಲಕ ಸನ್ಮಾನಿಸಿದರು.