ಅಲೋಕ್ ಆರ್ ಜೈನ್ ರಿಗೆ ಪುನೀತ್ ರಾಜ್ ರತ್ನ ಪ್ರಶಸ್ತಿ

Spread the love

ಮೈಸೂರು: ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ
ವಿವಿಧ ಕ್ಷೇತ್ರದ ಸಾಧಕರಿಗೆ ಪುನೀತ್ ರಾಜರತ್ನ ಪ್ರಶಸ್ತಿ ನೀಡಿ‌ ಗೌರವಿಸಲಾಯಿತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸ್ನೂಕರ್
ಹಾಗೂ ಪಂಜ ಕುಸ್ತಿ ಪಟು ಸಿದ್ದಾರ್ಥ ಲೇಔಟ್ ನಿವಾಸಿ ವಿಕಲಚೇತನ ಅಲೋಕ್ ಆರ್ ಜೈನ್ ಅವರಿಗೆ ಪುನೀತ್ ರಾಜರತ್ನ ಪ್ರಶಸ್ತಿ ಪ್ರದಾನ ಮಾಡಿ ಶಾಸಕ ಹರೀಶ್ ಗೌಡ ಗೌರವಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಗೋಪಿ, ಮೋಹನ್ ಕುಮಾರ್, ಮಹಾನ್ ಶ್ರೇಯಸ್, ಲೋಕೇಶ್, ನಿತಿನ್, ಚಂದ್ರು, ಲಕ್ಕೇಗೌಡ ಮತ್ತಿತರರು ಹಾಜರಿದ್ದರು.