ಪುನೀತ್ ಸಿನಿಮಾಗಳು ಯುವಕರಿಗೆ ಮಾದರಿ : ಜಿ ಶ್ರೀನಾಥ್ ಬಾಬು

Spread the love

ಮೈಸೂರು: ಡಾ.ರಾಜಕುಮಾರ್ ಅಣ್ಣಾವ್ರ ಸಿನಿಮಾದಂತೆ ಪುನೀತ್ ರಾಜಕುಮಾರ್ ಅವರ ಸಿನಿಮಾಗಳೂ ಸಮಾಜಕ್ಕೆ ಮಾದರಿ ಸಂದೇಶ ನೀಡುವಂತಹವು ಎಂದು ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು ಹೇಳಿದರು.

ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾ ರಾಜಕುಮಾರ್ ಪ್ರತಿಮೆಯ ಹತ್ತಿರ ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಪುನೀತ್ ರಾಜಕುಮಾರ್ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ಸಾರ್ವಜನಿಕರಿಗೆ ಅನ್ನದಾನ ಮಾಡಿದ ವೇಳೆ
ಅವರು ಮಾತನಾಡಿದರು.

ಸಮಾಜ ಸೇವೆಯ ತುಡಿತ ಹೊಂದಿದ್ದ ಪುನೀತ್, ಪ್ರಚಾರವಿಲ್ಲದೆ ನಡೆಸಿದ ದಾನ ಧರ್ಮ ಇಂದಿಗೂ ಅವರ ಹೆಸರು ಲಕ್ಷಾಂತರ ಜನರ ಮನದಲ್ಲಿ ಚಿರಸ್ಥಾಯಿ ಆಗಿರುವುದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ರಾಯಭಾರಿ ಆಗಿದ್ದ ಗಂಧದಗುಡಿ ಚಿತ್ರದ ಮೂಲಕ‌ ಅವರು,
ಜನರಿಗೆ ಅರಣ್ಯ ಸಂಪತ್ತಿನ ಪರಿಚಯ ಮಾಡಿಸಿದರು. ಅವರ ಚಿತ್ರಗಳಲ್ಲಿನ ಸಾಮಾಜಿಕ ಕಳಕಳಿ ಎಲ್ಲ ನಟರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ ರಾಘವೇಂದ್ರ, ಕಿಶೋರ್ ಕುಮಾರ್,ಶೇಖರ್, ಕಿರಣ್, ರಾಘವ, ಸುಬ್ಬಣ್ಣ, ಮಹೇಶ್ ಕುಮಾರ್, ಮಂಜುನಾಥ್ ಮತ್ತಿತರರು ಹಾಜರಿದ್ದರು.