ಪುನೀತ್‌ ಹೆಸರು ಅಮರ: ಡಿ ಟಿ ಪ್ರಕಾಶ್

Spread the love

ಮೈಸೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಮರೆಯಾಗಿ 3 ವರ್ಷ ಕಳೆದರೂ ಜನರ ಮನಸ್ಸಿನಲ್ಲಿ ಇಂದಿಗೂ ಅಮರವಾಗಿದ್ದಾರೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹೇಳಿದರು.

ಅವ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಜನರ ಮನಸ್ಸಿನಲ್ಲಿ ಇಂದಿಗೂ ಅಮರವಾಗಿದ್ದಾರೆ’ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹೇಳಿದರು.

ನಗರದ ಅಗ್ರಹಾರದಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನಟ ಪುನೀತ್ ರಾಜ್‌ಕುಮಾರ್‌ ಅವರ 3ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

ಇಡೀ ದೇಶವೇ ಪುನೀತ್‌ ಅವರನ್ನು ಇಂದಿಗೂ ಸ್ಮರಣೆ ಮಾಡುತ್ತದೆ. ಅವರ ಒಳ್ಳೆಯ ಕಾರ್ಯಗಳು ಎಲ್ಲರಿಗೂ ದಿಕ್ಸೂಚಿಯಾಗಿವೆ. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀ ಶಂಕರ ಮಠದ ಧರ್ಮದರ್ಶಿಗಳಾದ ರಾಮಚಂದ್ರ ರಾಯರು , ಎಂ. ಆರ್
ಬಾಲಕೃಷ್ಣ,ನಾಗಶ್ರೀ ಸುಚೀಂದ್ರ, ವಿದ್ಯಾ,
ಗೋಪಾಲ್ ರಾವ್, ಪಣೀಶ್,ರಂಗನಾಥ್, ನಾಗಭೂಷಣ್, ಕೆ ಎಂ ನಿಶಾಂತ್,ಜ್ಯೋತಿ ಮತ್ತಿತರರು ಹಾಜರಿದ್ದರು.