ಮೈಸೂರು: ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ
ಪುನೀತ್ ರಾಜಕುಮಾರ್ ಅವರ 50ನೇ ಜನುಮದಿನದ ಪ್ರಯುಕ್ತ ಬೇಸಿಗೆ ಬಿಸಿಲಿಗೆ ತಂಪು ನೀಡಲು ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು.
ಮಜ್ಜಿಗೆ ವಿತರಣೆ ಮಾಡಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಯುವ ಜನಾಂಗಕ್ಕೆ ಪುನೀತ್ ರಾಜಕುಮಾರ್ ಪ್ರೇರಣೇ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಏಕೆಂದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ಮಹತ್ವದ್ದು. ಬರೀ ನಟನೆಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆ, ಮಕ್ಕಳಿಗೆ ಉಚಿತ ಶಿಕ್ಷಣ, ಗೋಶಾಲೆ ಹೀಗೆ ನಾನಾ ಸಮಾಜಮುಖಿ ಕಾರ್ಯ ಮಾಡಿ ಯುವ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ್ ಮರಾಟಿಕ್ಯಾತನಹಳ್ಳಿ ಮಾತನಾಡಿ,ಅಪ್ಪು ಅವರು ಬಾಲ್ಯದಲ್ಲೇ ತಮ್ಮ ಬಾಲನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ ಎಂದು ಸ್ಮರಿಸಿದರು.
ವಿಶೇಷವಾಗಿ ನಂದಿನಿ ಬ್ರಾಂಡ್ ಅಂಬಾಸಿಡರ್ ಆಗಿ ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ ಹೀಗೆ ನಾನಾ ಬ್ರ್ಯಾಂಡ್ ಕಂಪನಿಗಳಿಗೆ ಒಂದು ಪೈಸೆ ಹಣ ಪಡೆಯದೆ ಉಚಿತವಾಗಿ ಜಾಹೀರಾತು ನೀಡಿದ್ದು ಒಂದು ವಿಶೇಷ ಕಾರ್ಯ ಎಂದು ನುಡಿದರು.
ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಮೇಶ್ ರಾಮಪ್ಪ ಮಾತನಾಡಿ,ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಹೆಮ್ಮೆಯ ಮನೆ ಮಗ. ಸುಮಾರು ಚಿತ್ರಗಳ ಮೂಲಕ ಎಲ್ಲರ ರಂಜಿಸಿದ ಮೇರು ನಟ ಎಂದು ಹೇಳಿದರು.
ಈ ವೇಳೆ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಕೆಂಪಿ, ಕಾನೂನು ವಿಭಾಗದ ಅಧ್ಯಕ್ಷರು ಹಿರಿಯ ವಕೀಲರಾದ ಜಯಲಕ್ಷ್ಮಣ,ಎಸ್ ಎಸ್ ವ್ಯದನಾಥ್, ಲೋಕೇಶ್, ರಾಜು, ವಾರದರಾಜು,ಪಾಂಡು ಮತ್ತು ಅಭಿಮಾನಿಗಳು ಮುಖಂಡರು ಉಪಸ್ಥಿತರಿದ್ದರು.
