ಅರಣ್ಯ ಸಂಪತ್ತು ಸಂರಕ್ಷಣೆ ತುರ್ತು ಅಗತ್ಯ:ದೀಪಕ್

Spread the love

ಮೈಸೂರು: ಮೈಸೂರು ನಗರದ ಅರಣ್ಯ ಸಂಪತ್ತನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ ರಂಗಭೂಮಿ ಕಲಾವಿದ ದೀಪಕ್ ತಿಳಿಸಿದರು

ನಗರದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಚಿತ್ರ ಭೂಮಿ ಇತ್ಯಾದಿ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ
ಕಾರ್ಯಕ್ರಮದಲ್ಲಿ ಮಕ್ಕಳಿಗೆ
ಭೂಮಿ ಹಾಗೂ ಪರಿಸರದ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೇವಲ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ,ಇದು ಅಪಾಯಕಾರಿಯಾಗಿದ್ದು, ಕನಿಷ್ಠ ಶೇ.33 ರಷ್ಟು ಅರಣ್ಯ ಇದ್ದರೆ ಮಾತ್ರ ಪರಿಸರ ಸಮತೋಲನ ಸಾಧ್ಯವಿದೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಅರಣ್ಯ ಪ್ರದೇಶದಲ್ಲಿರುವ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಉಳಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಅವಶ್ಯಕತೆ ಇದೆ ಎಂದು ದೀಪಕ್ ತಿಳಿಸಿದರು.

ಆಧುನಿಕತೆ ಬೆಳೆದಂತೆ ಭೂಮಿಗೆ ಕಂಟಕವಾಗುತ್ತಿದೆ,ಅದರ ವ್ಯತಿರಿಕ್ತ ಪರಿಣಾಮ ಈಗಾಗಲೇ ಅರಿವಾಗಿದೆ. ಭೂಮಿಗೆ ಕಂಟಕವಾದರೆ ಮನುಷ್ಯರಿಗೆ ಮಾತ್ರವಲ್ಲ, ಯಾವುದೇ ಜೀವಿಗಳಿಗೂ ಉಳಿಗಾಲವಿಲ್ಲ. ಈ ಭೂಮಿಯ ರಕ್ಷಣೆಯ ಬಗ್ಗೆ ಜಾಗ್ರತೆ ಮೂಡಿಸಲು ವಿಶ್ವ ಭೂಮಿ ದಿನವನ್ನು ಆಚರಿಸಲಾಗುವುದು ಎಂದು ಮಕ್ಕಲಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಭುವನ್, ವಿಸೃತ, ಚೆರಿತ, ಚಿನ್ಮಯ್, ಅನುಷ್ಕಾ, ಗಗಣ್ಯ ಮತ್ತಿತರರು ಹಾಜರಿದ್ದರು.