ವಿಕಲಚೇತನ ಫಲಾನುಭವಿಗಳು, ವಿದ್ಯಾರ್ಥಿಗಳಿಗೆ ಸವಲತ್ತು ವಿತರಣೆ

Spread the love

ಕೊಳ್ಳೇಗಾಲ: ಸರ್ಕಾರ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದರಿಂದ ಅನೇಕರು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಸಿ.ಡಿ.ಎಸ್ ಭವನದಲ್ಲಿ
ನಗರಸಭೆ ವತಿಯಿಂದ ವಿಕಲಚೇತನ ಫಲಾನುಭವಿಗಳು ಹಾಗೂ ವಿದ್ಯಾರ್ಥಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

ವಿಕಲಚೇತನರಿಗೂ ಸವಲತ್ತು ವಿತರಣೆ ಮಾಡಲಾಗುತ್ತಿದೆ. ಇದ್ದ ಅನುಧಾನದಲ್ಲಿ ಯಾರು ಅರ್ಜಿ ಹಾಕಿದ್ದರೋ ಅದನ್ನು ಪರಿಶೀಲನೆ ಮಾಡಿ ಅವರಿಗೆ ಸವಲತ್ತು ತಲುಪಿಸುವ ಕೆಲಸವನ್ನು ನಗರಸಭೆ ಯವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಒಂದು ಕಂಪ್ಯೂಟರ್ ಖರೀದಿ ಮಾಡಬೇಕಾದರೆ ಕನಿಷ್ಠ 50 ಸಾವಿರ ಬೇಕು. ಯಾರು ಮಧ್ಯ ಪ್ರವೇಶಿಸಿಸದಂತೆ ಆ ವಿದ್ಯಾರ್ಥಿಗೆ ನೆರವಾಗಿ ತಲುಪಲು ಅವರ ಖಾತೆಗೆ ನೇರವಾಗಿ ಹಣ ಜಮೆಯಾಗುವ ನಿಟ್ಟಿನಲ್ಲಿ ನಗರಸಭೆಯವರು 20 ಸಾವಿರ ರೂ ಸಹಾಯ ಧನ ಕಲ್ಪಿಸಿದ್ದಾರೆ. ಹಾಗೆಯೇ ತ್ರಿಚಕ್ರ ವಾಹನ 3 ಮಂದಿಗೆ ಅವಕಾಶವಿರುವುದು. ಪ್ರತಿ ವಿದ್ಯಾರ್ಥಿಗೂ ಕೂಡ ವರ್ಷಕ್ಕೆ 12 ಸಾವಿರ ಕೊಡುವ ಬದಲು ತಿಂಗಳಿಗೆ ಒಂದು ಸಾವಿರದಂತೆ ಆ ವಿದ್ಯಾರ್ಥಿಯ ಪಾಲನೆ ಪೋಷಣೆ ಮಾಡುವ ಪೋಷಕರ ಖಾತೆಗೆ ನೀಡುವ ಅವಕಾಶವಿದೆ. ಇದೆಲ್ಲವೂ ಬಡ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಮಾಡಿರುವುದು ಎಂದು ಶಾಸಕರು ವಿವರಿಸಿದರು.

ನಗರಸಭೆ ಪೌರಯುಕ್ತ ಪರಶಿವಯ್ಯನವರು ಕೇವಲ 2 ತಿಂಗಳ ಹಿಂದೆ ಪೌರಯುಕ್ತರಾಗಿ ಈ ತಿಂಗಳ 30 ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಆದರೆ ಅವರನ್ನು ಹಿಂದೆಯೇ ಪೌರಯುಕ್ತರನ್ನಾಗಿ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೂ ಕೂಡ ಪೌರಾಡಳಿತ ಆಡಳಿತ ಸೇವೆಗೆ ಸಂಬಂಧಿಸಿದಂತೆ ವ್ಯಾಸಂಗ ಮಾಡಿದ್ದರೆ ಮಾತ್ರ ಪೌರಯುಕ್ತರಾಗುವ ನಿಯಮವಿದ್ದರಿಂದ ಅವಕಾಶವಾಗಲಿಲ್ಲ. ಪೌರಯುಕ್ತ ರಮೇಶ್ ಅವರು 2 ತಿಂಗಳು ರಜೆ ಹಾಕಿದ್ದರಿಂದ ಎಇಇ ಪ್ರಸನ್ನ ಅವರು ಇದ್ದಾಗಿಯೂ ನಗರಸಭೆಯ ಕ್ಷೇತ್ರಾಭಿವೃಧ್ಧಿ ಅಧಿಕಾರಿಯಾಗಿರುವ ಪರಶಿವಯ್ಯರವರನ್ನು ನಗರಸಭೆ ಪೌರಯುಕ್ತರಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಸ್ಮರಿಸಿದರು.

ನಗರಸಭೆಯಲ್ಲಿ ಕೆಲಸ ಕಾರ್ಯಗಳಾಗುತ್ತಿಲ್ಲ ವರಮಾನ ಬರುತ್ತಿಲ್ಲ ಎಂಬ ಆರೋಪ ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಹಿಂದೆ ಬೆಳಗಾವಿ ಯಲ್ಲಿ ನಡೆದ ಅಧಿವೇಶನದಲ್ಲಿ ಖಾತೆಗಳಾಗುತ್ತಿಲ್ಲ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದೆ. ಅದನ್ನು ಪರಿಗಣಿಸಿದ ಸರ್ಕಾರ ಇಂದು ರಾಜ್ಯಾದ್ಯಂತ ಎ ಖಾತಾ, ಬಿ ಖಾತಾ ಮಾಡಲು ಹೊಸ ಕಾನೂನು ತಂದಿದೆ.

ಹೆಚ್ಚು ಶುಲ್ಕ ಪಾವತಿಸ ಬೇಕೆಂದು ಆರೋಪಿಸಿ ಮಧ್ಯವರ್ತಿಗಳು ಪ್ರತಿ ಭಟನೆ ಸಹ ಮಾಡಿದ್ದರು. ಆದರೆ ಶುಲ್ಕ ಜಾಸ್ತಿಯಾಗಿಲ್ಲ. ಹಿಂದೆ ಮಧ್ಯವರ್ತಿಗಳು ದುಪ್ಪಟ್ಟು ಹಣ ಪಡೆದು ಖಾತೆ ಮಾಡಿಸಿ ಕೊಡುತ್ತಿದ್ದರು ಆದರೆ ಇಂದು ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಇಂದು ಅನೇಕ ಮಂದಿ ಪ್ರಾಮಾಣಿಕವಾಗಿ ಖಾತೆ ಮಾಡಿಸಿ ಕೊಳ್ಳುತ್ತಿದ್ದಾರೆ.

ನಗರಸಭೆಯ ವಿಚಾರದಲ್ಲಿ ಎಲ್ಲಿಯೂ ಕೂಡ ವಿರುದ್ಧ ವಾದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರಬಾರದು ಆನಿಟ್ಟಿನಲ್ಲಿ ಕಾರ್ಯೋನ್ಮುರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ದಲ್ಲಿ ನಗರಸಭೆ ಪೌರಯುಕ್ತ ಪರಶಿವಯ್ಯ, ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಸುಮಾ ಸುಬ್ಬಣ್ಣ, ಭಾಗ್ಯ, ಕವಿತಾ, ರಾಘವೇಂದ್ರ, ಪ್ರಕಾಶ್, ಶಿವಮಲ್ಲು, ಮಂಜುನಾಥ್, ಜಿ.ಪಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.