ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಜಿ ಟಿ ದೇವೇಗೌಡ

Spread the love

ಮೈಸೂರು: ಕ್ಷೇತ್ರದ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಜಿ ಟಿ ದೇವೇಗೌಡ ಭರವಸೆ ನೀಡಿದರು.

ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದ ನಿವಾಸಿಗಳು ಬಡಾವಣೆಯಲ್ಲಿ ನೀರ ಹಾಗೂ ರಸ್ತೆ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಸಲ್ಲಿಸಿದ ಮನವಿ ಪತ್ರ ಸ್ವೀಕರಿಸಿ ಜಿ.ಟಿ‌.ದೇವೇಗೌಡ ಮಾತನಾಡಿದರು.

ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿದ‌ ಶಾಸಕರು, ಬಡಾವಣೆಯಲ್ಲಿ ನೀರು ಹಾಗೂ ರಸ್ತೆ ಸಮಸ್ಯೆಯನ್ನು ಅಧಿಕಾರಿಗಳ ಜತೆ ಚರ್ಚೆ ಮಾಡಿ ಕೂಡಲೇ ಸರಿಪಡಿಸಬೇಕೆಂದು ಸೂಚಿಸಿದರು.

ಕ್ಷೇತ್ರದಲ್ಲಿ ಓಡಾಡಿ ಸಾಧ್ಯವಾದಷ್ಟು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಮುಖಂಡ ಗಗನ್ ದೀಪ್ ಮಾತನಾಡಿ,ಕ್ಷೇತ್ರದ ಜನರ ಸಮಸ್ಯೆಗೆ ತಕ್ಷಣ ಪರಿಹಾರ ನೀಡುವ ಶಾಸಕ ಜಿ ಟಿ ದೇವೇಗೌಡ ಅವರಿಗೆ ಬಡಾವಣೆ ನಿವಾಸಿಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದರು

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ನಂಜುಂಡಸ್ವಾಮಿ, ಮಲ್ಲಿಕಾರ್ಜುನ, ರಂಗಸ್ವಾಮಿ, ಮರಿಗೌಡ, ಸತ್ಯಪ್ಪ, ಹರ್ಷ, ಮಂಜುನಾಥ್, ಈಶ್ವರಗೌಡ, ನಿರ್ಮಲ ಮುಂತಾದವರು ಹಾಜರಿದ್ದರು.