ವಸತಿ ಶಾಲೆ ವಿಧ್ಯಾರ್ಥಿಗಳ ಪ್ರತಿಭಟನೆ; ಪ್ರಿನ್ಸಿಪಲ್ ಸೇರಿ ಮೂವರು ಸಸ್ಪೆಂಡ್!

Spread the love

ಮೈಸೂರು: ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಂಜನಗೂಡು ತಾಲೂಕು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ವಿಧ್ಯಾರ್ಥಿಗಳ ಪ್ರತಿಭಟನೆಗೆ ಸರ್ಕಾರ ಎಚ್ಚೆತ್ತು ಕ್ರಮ ಜರುಗಿಸಿದೆ.

ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಪ್ರಾಂಶುಪಾಲರು ಮತ್ತು ಮೂವರನ್ನು ಅಮಾನತುಗೊಳಿಸಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹ ನಿರ್ದೇಶಕ ಕಾಂತರಾಜು ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರಾಂಶುಪಾಲೆ ವಸಂತ,ಪ್ರಭಾರ ನಿಲಯಪಾಲಕ ಮಹದೇವಪ್ಪ,ಗಣಿತ ಶಿಕ್ಷಕ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.

ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಲ್ಲವೆಂದು ಆರೋಪಿಸಿ 500 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಮತ್ತು ಪೊಷಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದರು.

ಇದರಿಂದ ಕೂಡಲೇ ಎಚ್ಚೆತ್ತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರಿನ್ಸಿಪಲ್ ಸೇರಿ ಮೂವರನ್ನು ಅಮಾನತು ಮಾಡಿ ಕ್ರಮ ಕೈಗೊಂಡಿದೆ.