ಪ್ರಯಾಗರಾಜ್: ಕುಂಭ ಮೇಳಕ್ಕೆ ಹೋಗಿ ಹಿಂದಿರುಗುವಾಗ ಅಪಘಾತ ಸಂಭವಿಸಿ ಬೆಳಗಾವಿಯ ನಾಲ್ವರು ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ
ಮಧ್ಯಪ್ರದೇಶದ ಇಂದೋರ್ ಮಾನ್ಪುರ ಭೈರವ ಘಾಟ್‌ನಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಮುಂದೆ ಚಲಿಸುತ್ತಿದ್ದ ಟ್ಯಾಂಕರ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಮನ್ಪುರ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.
ಅಪಘಾತಕ್ಕೀಡಾದ ಟೆಂಪೋ ಟ್ರಾವೆಲರ್‌ನಲ್ಲಿದ್ದ ಪ್ರಯಾಣಿಕರು ಬೆಳಗಾವಿಯವರು.ಟಿಟಿ ವಾಹನದಲ್ಲಿ 19 ಮಂದಿ ವಾಪಸಾಗುತ್ತಿದ್ದರು ಆಗ ಲಾರಿಗೆ ವಾಹನ ಡಿಕ್ಕಿ ಹೊಡೆದಿದೆ.
ಬೆಳಗಾವಿಯ ನಾಲ್ವರು ಇಂದೋರ್ನ ಇಬ್ಬರು ಸಾವನ್ನಪ್ಪಿದ್ದು,16 ಮಂದಿ ಗಾಯಗೊಂಡಿದ್ದಾರೆ.