ಮೈಸೂರು: ಪಾಕ್ ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೈನಿಕರು ತೋರಿದ ಸಾಹಸಕ್ಕೆ ಪ್ರಸಾದ್ ಸ್ಕೂಲ್ ಆಫ್ ರಿದಮ್ ವತಿಯಿಂದ ವಿಶೇಷವಾಗಿ ಕೃತಜ್ಞತೆ ಸಲ್ಲಿಸಲಾಯಿತು.
ಮೈಸೂರಿನ ರಾಮಾನುಜ ರಸ್ತೆಯಲ್ಲಿ
ಪ್ರಸಾದ್ ಸ್ಕೂಲ್ ಆಫ್ ರಿದಮ್
ಮಕ್ಕಳಿಂದ ದೇಶಪ್ರೇಮದ ವಾದ್ಯಗಳ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.
ನಂತರ ನಿವೃತ್ತ ಯೋಧರಾದ ನವೀನ್, ನವನೀತ್, ಗಿರೀಶ್, ಮಂಜುನಾಥ್, ಅಜಯ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮ ದಲ್ಲಿ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ ಅವರು,ಭಾರತೀಯ ಸೇನೆಯು ಶತ್ರು ರಾಷ್ಟ್ರದ ಹೆಡೆಮುರಿ ಕಟ್ಟುವ ಮೂಲಕ ಸರಿಯಾದ ಪಾಠ ಕಲಿಸಿದೆ. ನಾಗರಿಕರ ಬೆಂಬಲವಿಲ್ಲದೆ ಯಾವುದೇ ಸೈನ್ಯ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಮ್ಮ ಸೇನೆಯ ಸೇವೆಗೆ ಗೌರವ ಹಾಗೂ ಬೆಂಬಲ ನೀಡಿ, ಅವರ ಜೊತೆಗೆ ನಿಂತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಬಿ.ವಿ ಮಂಜುನಾಥ್, ಚಲನಚಿತ್ರ ನಟರಾದ ಶಿವಾಜಿ ರಾವ್ ಜಾದವ್, ಶಾಲೆಯ ಸಂಸ್ಥಾಪಕರಾದ ಆರ್ ರಾಘವೇಂದ್ರ ಪ್ರಸಾದ್, ಸುಚೇಂದ್ರ, ರಾಜಕುಮಾರ್, ನಾಗಶ್ರೀ ಸುಚಿಂದ್ರ, ರಂಗನಾಥ್ ಮತ್ತಿತರರು ಹಾಜರಿದ್ದರು.