ವಿಕಸಿತ ಭಾರತಕ್ಕೆ ಬಿಜೆಪಿ ಜತೆಯಾಗಿ: ಪ್ರಮೀಳಾ ಭರತ್ ಕರೆ

Spread the love

ಮೈಸೂರು: ವಿಕಸಿತ ಭಾರತ
ನಿರ್ಮಾಣಕ್ಕಾಗಿ ಬಿಜೆಪಿಯೊಂದಿಗೆ ಜೊತೆಯಾಗ ಬೇಕೆಂದು ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಹೇಳಿದರು.

ಬಿಜೆಪಿ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಿಸಿ ಅವರು ಮಾತನಾಡಿದರು.

ಸದಸ್ಯತ್ವ ಅಭಿಯಾನ ಅಭೂತಪೂರ್ವವಾಗಿ ನಡೆಯುತ್ತಿದೆ,ಇನ್ನೂ ಹೆಚ್ಚು ಮಂದಿ‌ ಸದಸ್ಯರಾಗಿರಿ ಎಂದು ಪ್ರಮೀಳಾ‌ ಭರತ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸುರೇಶ್, ವಿಘ್ನೇಶ್ವರ ಭಟ್, ಸುದರ್ಶನ್, ಚರಣ್, ಶ್ರೀನಿವಾಸ್, ರಾಮು, ಸುಚೇಂದ್ರ, ಮತ್ತಿತರರು ಹಾಜರಿದ್ದರು.