ಅಲ್ಯುಮಿನಿ ಐಟಿಐ ಪ್ರಶಸ್ತಿಗೆ ‌ಭಾಜನರಾದಪ್ರಮಥ ಮಂಜು

ಬೆಂಗಳೂರು: ಮೈಸೂರಿನ ಡಿ.ಮಂಜುನಾಥ್(ಪ್ರಮಥ ಮಂಜು)ಅವರು ಅಲ್ಯುಮಿನಿ ಐಟಿಐ ಪ್ರಶಸ್ತಿಗೆ ‌ಭಾಜನರಾಗಿದ್ದಾರೆ.

ಗುರುವಾರ ‌ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಕೌಶಲ್ಯ ಶೃಂಗ ಸಭೆ 2025ರಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ‌ ಶರಣ ಪ್ರಕಾಶ್ ಪಾಟೀಲ್ ಅವರು ಡಿ ಮಂಜುನಾಥ್ (ಪ್ರಮತ ಮಂಜು) ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಅಲ್ಯುಮಿನಿ ಐಟಿಐ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಅಲ್ಯುಮಿನಿ‌ ಐಟಿಐ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ಮಂಜು ಅವರಿಗೆ ವಿತರಿಸಿ,ಸನ್ಮಾನಿಸಿದ ಸಚಿವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಯಾತನಹಳ್ಳಿ ಪ್ರಕಾಶ್ ರವಿಶಂಕರ್ ಮತ್ತಿತರರು ಹಾಜರಿದ್ದರು.