ಪ್ರಾಚ್ಯವಿದ್ಯಾ ಸಂಶೋಧನಾಲಯ-ಶೃಂಗೇರಿಶ್ರೀ ಶಾರದಾ ಪೀಠ ಸಂಸ್ಥೆ‌ ಜತೆ ಒಡಂಬಡಿಕೆ

Spread the love

ಮೈಸೂರು: ಮೈಸೂರು ವಿವಿ ಅಂಗ ಸಂಸ್ಥೆ ಪ್ರಾಚ್ಯವಿದ್ಯಾ ಸಂಶೋಧನಾಲಯವು ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಅಪ್ರಕಟಿತ ಹಸ್ತಪ್ರತಿಗಳಲ್ಲಿರುವ ಕೃತಿಗಳ ಕುರಿತಾದ ಒಡಂಬಡಿಕೆಗೆ ಸಹಿ ಮಾಡಲಾಗಿದೆ.

ಇದರ ಅಡಿಯಲ್ಲಿ ವಿದ್ವಾಂಸರ ಮೂಲಕ
ಅಪ್ರಕಟಿತದವಾದ ಅಂದಾಜು 13000 ಹಸ್ತಪ್ರತಿಗಳಲ್ಲಿರುವ ಕೃತಿಗಳ ವರ್ಣನಾತ್ಮಕ ಸೂಚಿಯನ್ನು ಮಾಡಲು,
ಆಯ್ದ ಕೃತಿಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಲು ಮತ್ತು ಗಣಕೀಕೃತ ಮಾಡಲು ನಿಶ್ಚಯಮಾಡಲಾಗಿದೆ.

ಈ ಒಡಂಬಡಿಕೆಯ 92,40,000 ರೂಗಳ ಈ ಯೋಜನೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಎಂ.ಕೆ.ಸವಿತಾ ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಪಿ.ಎ.ಮುರಳಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎನ್.ಕೆ.ಲೋಕನಾಥ್, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾದ ಡಾ. ಡಿ.ಪಿ. ಮಧುಸೂಧನಾಚಾರ್ಯ ಹಾಗೂ ಉಭಯ ಸಂಸ್ಥೆಗಳ ವಿದ್ವಾಂಸರು ಉಪಸ್ಥಿತರಿದ್ದರು.