ಮೈಸೂರು: ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ಶುಭ.ಬಿ ಅವರು ತಿಳಿಹೇಳಿದರು.
ಕಡಕೊಳಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ವೇಳೆ ಅವರು ಮಾತನಾಡಿದರು.
ಪೌರ ಕಾರ್ಮಿಕರು ನಗರ ಸ್ವಚ್ಛತೆ ಕಡೆ ಗಮನ ಕೊಡುವಂತೆಯೇ ತಮ್ಮ ಆರೋಗ್ಯ ವನ್ನೂ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಜಿಲ್ಲಾನಗರಾಭಿವೃಧಿ ಕೋಶದ ವ್ಯವಸ್ಥಾಪಕ ಮುರುಗೇಶ್, ಪೌರಕಾರ್ಮಿಕರ ಸಂಘದ ಉಪಾದ್ಯಕ್ಷ ಡಿ.ಆರ್ ರಾಜು, ಪಟ್ಟಣ ಪಂಚಾಯಿತಿಯ ಸ್ವಚ್ಚ ಭಾರತದ ಪ್ರತಿನಿಧಿ ಕುಮಾರ ಸ್ವಾಮಿ, ಮುಖ್ಯಾಧಿಕಾರಿ ಹೆಚ್.ಆರ್ ದೀಪಾ, ಆರೋಗ್ಯ ನಿರೀಕ್ಷಕ ಆರ್.ಮಂಜುನಾಥ್, ಸಮುದಾಯ ಸಂಘಟನಾಧಿಕಾರಿ ಡಾ:ಶಂಕರ್, ಲೆಕ್ಕಾಧಿಕಾರಿ ಸತೀಶ್, ಕಂದಾಯ ನಿರೀಕ್ಷಕ ಶಿವಕುಮಾರ್, ವೀಣಾ ಈರಯ್ಯ ಹಾಗೂ ಕರ ವಸೂಲಿಗಾರರಾದ ಬೀರಯ್ಯ,ಲೋಕೇಶ್ ಹಾಗೂ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.