ಮೈಸೂರು: ಮೈಸೂರಿನ ಕಡಕೋಳ ಗ್ರಾಮದ ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ ಹಾಗೂ ಕಾಳಿ ಬೀರೇಶ್ವರ ಟ್ರಸ್ಟ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಕಡಕೋಳ ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಕಾಳಿ ಬೀರೇಶ್ವರ ಟ್ರಸ್ಟ್ ಅಧ್ಯಕ್ಷ ಬಿ ನಾಗರಾಜ್ ಅವರು, ನಮ್ಮ ಗ್ರಾಮಗಳ ಸ್ವಚ್ಛತೆ ಮಾಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಪೌರಕಾರ್ಮಿಕರನ್ನು ವಿಶ್ವಾಸ ಮತ್ತು ಗೌರವದಿಂದ ಕಾಣಬೇಕೆಂದು ಮನವಿ ಮಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ಪೌರಕಾರ್ಮಿಕರಿಗೆ ದಸರಾ ಹಬ್ಬದ ಪ್ರಯುಕ್ತ ಪುರುಷರಿಗೆ ಹೊಸ ಬಟ್ಟೆ ಮಹಿಳಾ ಪೌರಕಾರ್ಮಿಕರಿಗೆ ಹೊಸ ಸೀರೆ ಬಟ್ಟೆಗಳನ್ನು ವಿತರಿಸಿ ಗೌರವಿಸಿ ಸನ್ಮಾನ ಮಾಡುವುದರಿಂದ ಇದು ಅವರ ಸೇವೆಗೆ ಸಂದ ಗೌರವ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆಂಪೇಗೌಡ, 33 ಹಳ್ಳಿ ಯಜಮಾನರಾದ ಸಿದ್ದರಾಮೇಗೌಡ, ನಂಜುಂಡೇಗೌಡ ಖಜಾಂಚಿ ಶ್ರೀ ಕೃಷ್ಣ, ಕೆ. ಟಿ ಶಿವಣ್ಣ, ಟ್ರಸ್ಟಿನ ಸದಸ್ಯರಾದ ಶಿವಬೀರ, ಸಿದ್ದಪ್ಪ, ಹುಚ್ಚೇಗೌಡ, ಕಾಳೇಗೌಡ, ಮಾಲೆಗೌಡ,ಮಾದೇಗೌಡ, ಶಿವ ಬೇರ, ಶಿವಕುಮಾರ್, ಮಹದೇವ, ಕರ್ನಾಟಕ ರಕ್ಷಣಾ ವೇದಿಕೆಯ ರಾಕೇಶ, ವೀರೇಶ, ಮಾಲೆಗೌಡ, ಚಿಕ್ ಪುಟ್ಟಯ್ಯ, ಶಂಭುಲಿಂಗು, ಚನ್ನಬಸವ, ಸುಬ್ಬೇಗೌಡ, ನಾರಾಯಣ ನಾಯ್ಕ, ಬಿಕೆಟಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರಾದ ಎಂ ಕುಮಾರಸ್ವಾಮಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಹಾಗೂ ಪೌರಕಾರ್ಮಿಕರು ಗ್ರಾಮಸ್ಥರು ಹಾಜರಿದ್ದರು.