ಮೈಸೂರು: ಕನ್ನಡ ಕ್ರಾಂತಿದಳದ ನಿರಂತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಲಿಗಳನ್ನು ವಿಷಹಾಕಿ ಕೊಲ್ಲುವವರಿಗೆ ಕಠಿಣ ಕಾನೂನು ಕ್ರಮ ಶತ ಸಿದ್ಧ ಎಂದು ಹೇಳಿರುವುದನ್ನು ಸ್ವಾಗತಿಸುವುದಾಗಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ
ಹೇಳಿದ್ದಾರೆ.
ನಿರಂತರವಾಗಿ ಹುಲಿಗಳಿಗೆ ವಿಷಹಾಕಿ ಕೊಲ್ಲುತ್ತಿರುವುದರ ವಿರುದ್ಧ ತೇಜಸ್ವಿ ನಾಗಲಿಂಗಸ್ವಾಮಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ ಹಾಗೂ ಅನೇಕ ಬಾರಿ ಪತ್ರ ಬರೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಹುಲಿಗಳು ಮತ್ತು ಆನೆಗಳ ಹತ್ಯೆ ಮಾಡುವವರ ವಿರುದ್ಧ ನಿರಂತರವಾಗಿ ಸಮರಸಾರುತ್ತ ಬಂದಿದಿದ್ದೇವೆ ಎಂದು ತೇಜಸ್ವಿ ತಿಳಿಸಿದ್ದಾರೆ.
ಇದೆಲ್ಲದರ ಪರಿಣಾಮವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹುಲಿಗಳನ್ನು ವಿಷಾಹಾಕಿ ಹತ್ಯೆ ಮಾಡುವುದುನ್ನು ರಾಜ್ಯ ಸರ್ಕಾರ ಸಹಿಸಲ್ಲ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಶತಸಿದ್ಧ ಎಂದು ಕಠಿಣವಾಗಿ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿಯವರ ಈ ನಿಲುವಿನಿಂದ ನನಗೆ ಅತ್ಯಂತ ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸ್ವಾಗತಿಸಿದ್ದಾರೆ.
ಆದರೆ ಮುಖ್ಯಮಂತ್ರಿಗಳ ಈ ನಿರ್ಧಾರ ಹೇಳಿಕೆಗೆ ಮಾತ್ರ ಸಿಮೀತ ವಾಗಬಾರದು ಹುಲಿಗಳು ಮತ್ತು ಆನೆಗಳ ಹತ್ಯೆ ಪ್ರಕರಣದಲ್ಲಿ ಈ ಗಿರುವ ಕಾನೂನನ್ನು ತಿದ್ದುಪಡಿ ಮಾಡಿ ಹೇಳಿದ ಹಾಗೆ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.
ಆನೆಗಳು ಮತ್ತು ಹುಲಿಗಳು ನಮ್ಮ ರಾಜ್ಯದ ಮೊದಲ ಮತ್ತು ಎರಡನೇಯ ಸ್ಥಾನದಲ್ಲಿದೆ ಇವುಗಳ ಸಂತತಿ ಬೇಟೆಗಾರರ ದುಷ್ಕೃತ್ಯ ದಿಂದ ನಾಶವಾಗದಂತೆ ಕಠಿಣ ಕಾನೂನು ಜಾರಿಗೆ ತರಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.