ಸುಧೀರ್ಘ ಅವಧಿಗೆ ದೇಶವನ್ನಾಳಿದ ಎರಡನೇ ಪ್ರಧಾನಿ ಮೋದಿ:ಬಿಜೆಪಿ ಸಂಭ್ರಮ

Spread the love

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 4078 ದಿನಗಳಾಗಿದ್ದು, ಸುಧೀರ್ಘ ಅವಧಿಗೆ ದೇಶವನ್ನಾಳಿದ ಎರಡನೇ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿಗರು ಸಂಭ್ರಮಿಸಿದ್ದಾರೆ.

ಇದೇ ಹರ್ಷದಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ರಾಮಕೃಷ್ಣ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನ ಮಂತ್ರಿ ಮೋದಿಯವರಿಗೆ ಮತ್ತಷ್ಟು ದೇಶ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ
ನಂತರ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಯಾದ ಮೇಲೆ ದೇಶದ ಚಿತ್ರಣ ಬಹುವಾಗಿ ಬದಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ, ವಿಮಾನ ನಿಲ್ದಾಣಗಳು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ, ಬಡವರಿಗೆ ಜನೌಷಧ ಮೂಲಕ ಕಡಿಮೆ ಧರಕ್ಕೆ ಔಷಧಿಗಳು ಸಿಗುತ್ತಿವೆ, ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿಂದ ಸೈನ್ಯ ಬಲಗೊಂಡಿದೆ, ಉತ್ತಮ ವಿದೇಶಾಂಗ ನೀತಿಗಳಿಂದ ದೇಶಕ್ಕೆ ಕೀರ್ತಿ ಬಂದಿದೆ, ಸ್ವಚ್ಛ ಭಾರತದ ಕಲ್ಪನೆ ಜನರ ಬಳಿಗೆ ತಲುಪಿದೆ, ರಾಮ ಮಂದಿರ, ಕಾಶ್ಮೀರದ 370ನೇ ವಿಧಿಯ ವಿಚಾರಗಳು ಬಗೆಹರಿದಿವೆ, ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶ ಲಭಿಸಿದೆ. ಇಷ್ಟೆಲ್ಲ ಸಾಧಿಸಿರುವ ಪ್ರಧಾನ ಮಂತ್ರಿಗಳು ಸಿಕ್ಕಿರುವುದು ದೇಶದ ನಾಗರಿಕರ ಸೌಭಾಗ್ಯ ಹಾಗಾಗಿ ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರುಗಳಾದ ಹೆಚ್.ಜಿ. ರಾಜಮಣಿ, ಬಿ.ಸಿ.ಶಶಿಕಾಂತ್, ಶಿವು ಪಟೇಲ್, ಹೆಚ್.ಎಸ್ ಹಿರಿಯಣ್ಣ, ಎಸ್ ಟಿ ಮೋರ್ಚಾ ನಗರ ಉಪಾಧ್ಯಕ್ಷ ಎಸ್ ತ್ಯಾಗರಾಜ್ ಮಹಿಳಾ ಮೋರ್ಚಾ ನಗರ ಕಾರ್ಯದರ್ಶಿ ವಿಜಯ ಮಂಜುನಾಥ್, ಮಂಡಲದ ಕಾರ್ಯದರ್ಶಿಗಳಾದ ರಾಚಪ್ಪಾಜಿ, ಶ್ರೀನಿವಾಸ್ ಪ್ರಸಾದ್, ಸೋಮಣ್ಣ, ತುಳಸಿ ವಿನುತ, ಮೋರ್ಚಾ ಪದಾಧಿಕಾರಿಗಳಾದ ರಂಗೇಶ್, ಚಂದ್ರಶೇಖರ ಸ್ವಾಮಿ, ರಾಘವೇಂದ್ರ, ಮಹೇಶ್, ರಾಜ ನಾಯಕ್, ಪುಟ್ಟಮ್ಮಣ್ಣಿ, ಮುಖಂಡರಾದ ರಾಮಕೃಷ್ಣಪ್ಪ, ನಂಜಪ್ಪ, ರಮಾಭಾಯಿ, ರಾಧಾ ಮುತಾಲಿಕ್, ದೇವರಾಜ್, ಲೋಕೇಶ್ ರೆಡ್ಡಿ, ನಾಗೇಶ್ ನಾಯಕ್, ಗಂಗಾಧರ್, ಅನಿತಾ, ಸುಮಿತ್ರಾ, ಸುಧಾ ಸೇರಿದಂತೆ ಹಲವರು ಭಾಗವಹಿಸಿದ್ದರು.