ಮನೆಗಳ ಬಳಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಶಾಲಾ ಮಕ್ಕಳು

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಚಿಲಕವಾಡಿ ಗ್ರಾಮದಲ್ಲಿರುವ ಎಸ್.ಪಿ.ಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್ ಮಕ್ಕಳು ಶಾಲೆ ಹಾಗೂ ತಮ್ಮ ಮನೆಗಳ ಬಳಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿ ಸಂಭ್ರಮಿಸಿದರು.

ಶಾಲೆಯ ಸಂಸ್ಥಾಪಕ ನಿರಂಜನ್ ಕೆ. ಗೌಡ ಅವರು ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆದರಂತೆ ಎಲ್ಲಾ ಮಕ್ಕಳಿಗೂ ಉಚಿತವಾಗಿ ಗಿಡಗಳ ವ್ಯವಸ್ಥೆ ಮಾಡಿದ್ದರು. ಮಕ್ಕಳು ಶಾಲೆಯ ಆವರಣದಲ್ಲಿ ಹಾಗೂ ತಮ್ಮ-ತಮ್ಮ ಮನೆಗಳ ಮುಂಭಾಗದಲ್ಲಿ ಪೋಷಕರೊಡನೆ ಗಿಡ ನೆಟ್ಟು ಸಂಭ್ರಮಿಸಿದರು.

ಮಕ್ಕಳು ತಮ್ಮ ನೆರಹೊರೆಯವರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡುವಂತೆ ಮಾಡಿದ್ದಾರೆ ಜತೆಗೆ ಪೋಷಕರೊಡನೆ ಸಂಭ್ರಮಿಸುವ ಪೋಟೋ ಗಳನ್ನು ತಮ್ಮ ಮೊಬೈಲ್ ಸ್ಟೇಟಸ್ ಗಳಲ್ಲಿ ಹಾಕುವ ಮೂಲಕ ಪರಸ್ಪರ ವಿನಿಮಯ ಮಾಡಿ ಕೊಂಡು ಖುಷಿ ಪಟ್ಟರು.

ಈ ಕುರಿತು ಮಾತನಾಡಿದ ನಿರಂಜನ್ ಕೆ. ಗೌಡ ಅವರುರು ಇಂದಿನ ಜಾಗತೀಕರಣ ನಗರೀಕರಣ, ತಂತ್ರಜ್ಞಾನದ ಮುನ್ನೋಟದಲ್ಲಿ ಇತ್ತೀಚೆಗೆ ಗ್ರಾಮೀಣ ಮಕ್ಕಳಲ್ಲಿ ಪರಿಸರ ಕಾಳಜಿ ಕಡಿಮೆ ಯಾಗುತ್ತಿದೆ ಹಾಗಾಗಿ ಪರಿಸರ ಸಂರಕ್ಷಣೆ ಮಕ್ಕಳಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಮಮತಾ ಹಾಗೂ ಸಹ ಶಿಕ್ಷಕರು ಮತ್ತಿತರರು ಭಾಗವಹಿಸಿದ್ದರು.