ಮೈಸೂರು: ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವಗಿಡಾದ ಪ್ರಯಾಣಿಕರಿಗೆ ಮೈಸೂರಿನಲ್ಲಿ ಮೇಣದಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಲಾಯಿತು.
ನಗರದ ಡಿ ದೇವರಾಜ ಅರಸು ರಸ್ತೆಯಲ್ಲಿ ಕರ್ನಾಟಕ ಹಿತರಕ್ಷಣ ವೇದಿಕೆ ವತಿಯಿಂದ
ಅಹಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ
ದುರಂತದಲ್ಲಿ ಸಾವಿಗಿಡಾದ ಪ್ರಯಾಣಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,
ಈ ದುರಂತ ತೀವ್ರ ಆಘಾತ ಹಾಗೂ ದಿಗ್ಭ್ರಮೆಯನ್ನು ಉಂಟು ಮಾಡಿದೆ ಎಂದು ಹೇಳಿದರು.
ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ, ಮೃತರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಈ ವಿಮಾನ ಪತನದ ಬಗ್ಗೆ ಶೀಘ್ರ ತನಿಖೆಯಾಗಲಿ ಎಂದು ಅವರು ಹೇಳಿದರು.
ವಿನಯ್ ಅವರೊಂದಿಗೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಮಂಜುನಾಥ್,ಎಸ್ ಎನ್ ರಾಜೇಶ್, ರವಿಚಂದ್ರ, ನೀತು, ನಂಜುಂಡಿ, ಸಂತೋಷ್, ರಾಕೇಶ್, ಕಣ್ಣನ್, ರವಿ, ಉಮೇಶ್, ಸತೀಶ್, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ ಮತ್ತಿತರರು ಮೇಣದ ಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಿದರು.