ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದಪುಟಾಣಿ ಪಿಯೂಷ್ ರಂಜನ್ ರಾವ್

Spread the love

ಮೈಸೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮೈಸೂರಿನ ಈ ಪುಟ್ಟ ಪೋರ ದಾಖಲೆ ಬರೆದಿದ್ದಾನೆ.

ಮೈಸೂರಿನ ಶ್ರೀ ಶಾರದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಪಿಯೂಷ್ ರಂಜನ್ ರಾವ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೀರ್ತಿಗೆ ಭಾಜನರಾಗಿದ್ದಾರೆ.

ಒಂದು ನಿಮಿಷದಲ್ಲಿ ಪಿಯೂಷ್ ರಂಜನ್ ರಾವ್ ಕಣ್ಣು ಮುಚ್ಚಿ ಪ್ರದರ್ಶಿಸಿ ತಮ್ಮದೇ ಹೊಸ ದಾಖಲೆ ನಿರ್ಮಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಒಂದು ನಿಮಿಷದಲ್ಲಿ ಗರಿಷ್ಠ ಸಂಖ್ಯೆಯ ಕಾರ್ಟ್‌ವೀಲ್‌ಗಳನ್ನು ಕಣ್ಣುಮುಚ್ಚಿ ಪ್ರದರ್ಶಿಸಿ ದಾಖಲೆ ಮಾಡಿದ್ದಾರೆ.

ಕರ್ನಾಟಕದ ಮೈಸೂರಿನ ಪಿಯೂಷ್ ರಂಜನ್ ರಾವ್ ಸೆಪ್ಟೆಂಬರ್ 20, 2017 ರಂದು ಜನಿಸಿದ್ದಾರೆ.ಅವರು ದಾಖಲೆ ಮಾಡುವಾಗ (ಡಿಸೆಂಬರ್ 31, 2024) 7 ವರ್ಷ, 3 ತಿಂಗಳು ಮತ್ತು 11 ದಿನಗಳು. ಒಂದು ನಿಮಿಷದಲ್ಲಿ ಕಣ್ಣುಮುಚ್ಚಿ 48 ಕಾರ್ಟ್‌ವೀಲ್‌ಗಳನ್ನು ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮುಡಿಗೇರಿಸಿಕೊಂಡಿದ್ದಾರೆ.

ಪಿಯೂಶ್ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ಮೈಸೂರಿನಲ್ಲಿ ಓದುತ್ತಿದ್ದಾರೆ ಮತ್ತು ಟೀಮ್ ಅನ್‌ಬೀಟೆಬಲ್ನಲ್ಲಿ ಜಿಮ್ನಾಸ್ಟಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ.

ಇವರ ಸಾಧನೆಗೆ ಶಾಲೆಯ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

ಪಿಯೂಶ್ ರಂಜನ್ ರಾವ್ ಇನ್ನೂ ಹೆಚ್ಚು ದಾಖಲೆಗಳನ್ನು ನಿರ್ಮಿಸಲಿ ಎಂದು ವರ್ಷಿಣಿ ನ್ಯೂಸ್ ಹಾರೈಸುತ್ತದೆ.