ಮೈಸೂರು: ಪಿತೃ ದೋಷ ಪರಿಹಾರಕ್ಕಾಗಿ ಹಾಗೂ ಮಹಾಲಯ ಪಿತೃ ಪಕ್ಷದ ಅಂಗವಾಗಿ ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪಿತೃ ಶಾಂತಿ ಹೋಮ ನೆರವೇರಿಸಲಾಯಿತು.
ಮಹಾಲಯ ಅಮಾವಾಸ್ಯೆ ಮುನ್ನ ಪಿತೃ ಪಕ್ಷದ ಅಂಗವಾಗಿ ಸಾಮೂಹಿಕ
ತಿಲತರ್ಪಣ, ಪಿಂಡಪ್ರದಾನ, ಪಿತೃ ಶಾಂತಿ ಹೋಮ,ಪಿತೃ ಪಕ್ಷದ ಅಂಗವಾಗಿ ಪಿತೃ ದೋಷ ಪರಿಹಾರ ಮಾಡಲಾಯಿತು.
ರುದ್ರ ಶಾಂತಿ ಪುರುಷ ಸೂಕ್ತ, ಶ್ರೀ ಸೂಕ್ತ ಹೋಮದಿಂದ ಪಿತೃ ದೋಷವುಳ್ಳ ಭಕ್ತಾದಿಗಳು ಪಿತೃ ಶಾಂತಿ ಹೋಮವನ್ನು ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂಕಲ್ಪ ಮಾಡಿ ಪಿತೃ ಪೂಜೆ ಮಾಡಿದರು.