ಪಿಂಕಾಕ್ ಸಿಲತ್ ಚಾಂಪಿಯನ್ ಶಿಪ್ ನಲ್ಲಿ ಸ್ಕಂದ ಎಂ ಗೆ ಬೆಳ್ಳಿ ಪದಕ

Spread the love

ಚಾಮರಾಜನಗರ: ಚಾಮರಾಜನಗರದ ಸೇವಾ ಭಾರತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸ್ಕಂದ ಎಂ ಅವರು ಪಿಂಕಾಕ್ ಸಿಲತ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದು ಕೀರ್ತಿ ತಂದಿದ್ದಾರೆ.

ಪಿಂಕಾಕ್ ಸಿಲತ್ ಫೆಡರೇಷನ್ ವತಿಯಿಂದ ಚೆನೈನಲ್ಲಿ ನಡೆದ 6ನೇ ಸೌತ್ ಜೊನ್ ಪಿಂಕಾಕ್ ಸಿಲತ್ ಚಾಂಪಿಯನ್ ಶಿಪ್ 2025-26 ರ ಟ್ಯಾಂಡಿಂಗ್ ವಿಭಾಗದಲ್ಲಿ ಸ್ಕಂದ ಅವರು ಬೆಳ್ಳಿಯ ಪದಕ ಹಾಗೂ ತುಂಗಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ ಎಂದು ಚಾಮರಾಜನಗರ ಜಿಲ್ಲೆ ಪಿಂಕಾಂಕ್ ಸಿಲತ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ತರಬೇತಿದಾರಾರೂ ಆಗಿರುವ ಕೆ.ಜೆ. ಮುರುಳಿ ತಿಳಿಸಿದ್ದಾರೆ.

ಈ ಪಂದ್ಯದ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ ನಲ್ಲಿ ನೆಡೆಯುವ ರಾಷ್ಟ್ರೀಯ ಪಿಂಕಾಂಕ್ ಸಿಲತ್ ಕ್ರೀಡಾಂಗಣದಲ್ಲಿ ಸ್ಕಂದ ಎಂ ಮತ್ತು ಹಿತೈಷಿ ಭಾಗವಹಿಸುತ್ತಾರೆಂದು ತಿಳಿಸಿದ್ದಾರೆ.

ಈ ಖುಷಿಯನ್ನು ಹಂಚಿಕೊಂಡಿರುವ ಸ್ಕಂದ ಎಂ.ಅವರು,ನನ್ನ ಪೋಷಕರ ಬೆಂಬಲ ಹಾಗೂ ತರಬೇತುದಾರರ ಮಾರ್ಗದರ್ಶನದಿಂದ ಈ ಗೆಲುವು ಲಭಿಸಿದೆ ಎಂದು ತಿಳಿಸಿದರು.

ಸ್ಕಂದನ ಸಾಧನೆಯನ್ನು ಗುರುತಿಸಿ ಅವರ ಸ್ವಗ್ರಾಮ ಕೂಡ್ಲೂರಿನಲ್ಲಿ ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಅಭಿನಂದಿಸಿದ್ದಾರೆ.
.‌
ಈ ಸಂದರ್ಭದಲ್ಲಿ ಸ್ಕಂದ ಎಂ ಅವರ ಪೋಷಕರಾದ ಜ್ಯೊತಿ,ಕೆ.ಆರ್. ಮಂಜು, ಮೈಸೂರು ಜಿಲ್ಲಾ ಪಿಂಕಾಂಕ್ ಸಿಲತ್ ಅಸೋಸಿಯೇಷನ್ ಅಧ್ಯಕ್ಷ ಮಹದೇವ್, ಪಿಂಕಾಂಕ್ ಸಿಲಾತ್ ತರಬೇತುದಾರ ಹಾಗೂ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಕೆ.ಜೆ.‌ ಮುರಳಿ , ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.