ಪಿ ಜಿ ಆರ್ ಎಸ್ ಎಸ್ ವೃದ್ಧರ ಬೃಂದಾವನದಲ್ಲಿ ಪೊಲಿಯೊ ಅಭಿಯಾನ

ಮೈಸೂರು: ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ತಾಯಂದಿರ ಸಮ್ಮುಖದಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಳ್ಳಲಾಯಿತು.

ಡಿಸೆಂಬರ್ 21ರಿಂದ 24 ರವರೆಗೆ ಪೊಲಿಯೊ ಅಭಿಯಾನವನ್ನು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದೆ.

ಪ್ರತಿ ಪೊಲಿಯೊ ಹನಿ ಪ್ರತಿ ಮಗುವಿಗೂ ಅಮೂಲ್ಯ.
ತಂದೆ ತಾಯಂದಿರು ತಪ್ಪದೆ ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನ ಹಾಕಿಸಬೇಕೆಂದು ಈ ವೇಳೆ ಮನವಿ ಮಾಡಲಾಯಿತು.

ಈ‌ ವೇಳೆ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಕಂಪ್ಯೂಟರ್ ಆಪರೇಟರ್ ಹರಿಣಿ ಮತ್ತು ಎಲ್ಲಾ ತಾಯಂದಿರು ಹಾಜರಿದ್ದರು.