ಸರ್ಕಾರಗಳು ಮಾಡುವ ಕೆಲಸವನ್ನು ಸಂಸ್ಥೆಗಳು ಮಾಡುತ್ತಿವೆ: ಶ್ರೀ ಶ್ರೀನಿವಾಸ್

Spread the love

ಮೈಸೂರು: ಸಂಸ್ಥೆಗಳು ಕೂಡಾ ಸರ್ಕಾರಗಳು ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು
ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಶ್ರೀನಿವಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತಲ್ಲಿರುವುದು ಸ್ತ್ಯುತ್ಯ್ರರ್ಹ” ಎಂದು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಯಾದ ಶ್ರೀ ಶ್ರೀನಿವಾಸ್ ರವರು ತಿಳಿಸಿದರು.

ಹೂಟಗಳ್ಳಿಯಲ್ಲಿ ಪಿ.ಜಿ.ಅರ್.ಎಸ್.ಎಸ್. ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಎರಡನೆ ಆಷಾಡ ಶುಕ್ರವಾರದ ಚಾಮುಂಡೇಶ್ವರಿ ದೇವಿಯ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೈಸೂರಿನಲ್ಲಿ ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತಿವುದು ಸ್ತ್ಯುತ್ಯ್ರಾರ್ಹ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹರೀಶ ಯಾದವ್ ಮಾತನಾಡಿ,
ಪಿ.ಜಿ.ಆರ್.ಎಸ್. ಎಸ್. ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಮಾಜಮುಖಿಯಾಗಿ ಕಾರ್ಯವನ್ನು ನಿರ್ವಹಿಸುತ್ತಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿ. ರವೀಂದ್ರ ಪ್ರಧಾನ ಕಾರ್ಯದರ್ಶಿ, ಸತೀಶ್ ಉಪಾಧ್ಯಕ್ಷರು, ಎ.ಸವಿತ ಗೌರವಾಧ್ಯಕ್ಷರು,. ಪಲ್ಲವಿ, ಸಹ ಕಾರ್ಯದರ್ಶಿ, ರಾಜ್ಯ ಸಂಚಾಲಕರು ರಕ್ತದಾನಿ ಮಂಜು, ಝನ್ಸಿರಾಣಿ, ಸಂಘಟನಾ ಕಾರ್ಯದರ್ಶಿ ಮತ್ತು ಮಂಜುಳಾ ಖಜಾಂಜಿ ಹಾಗೂ ಪತ್ರಕರ್ತ ಮನೋಹರ್ ಮತ್ತು ಸಾರ್ವಜನಿಕರು ಭಾಗವನಸಿದ್ದರು.