ಪಿ‌ ಜಿ ಆರ್ ಎಸ್ ಎಸ್ ನಿರಾಶ್ರಿತರು, ವೃದ್ಧರ ಬೃಂದಾವನಕ್ಕೆ ಸ್ವಾತಿ ರಾಜ್ ಭೇಟಿ

Spread the love

ಮೈಸೂರು: ಮೈಸೂರಿನ ಪಿ‌ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಸಮಾಜ ಸೇವಕರಾದ ಸ್ವಾತಿ ರಾಜ್ ಅವರು ಆಗಮಿಸಿ ತಮ್ಮ ಹುಟ್ಟುಹಬ್ಬವನ್ನು ಎಲ್ಲಾ ತಾಯಂದಿರ ಸಮ್ಮುಖದಲ್ಲಿ ಆಚರಿಸಿಕೊಂಡರು.

ಈ ವೇಳೆ ದಿನಸಿ ಪದಾರ್ಥ ಮತ್ತು ಎಲ್ಲರಿಗೂ ಬೆಡ್ ಶೀಟ್ ಕೊಡುವ ಮುಖಾಂತರ ಸ್ವಾತಿ ಅವರು ಸರಳವಾಗಿ ಹುಟ್ಟುಹಬ್ಬವನ್ನು ಅವರ ಸ್ನೇಹಿತರ ಜೊತೆ ಸೇರಿ ಆಚರಣೆ ಮಾಡಿಕೊಂಡರು.

ಎಲ್ಲಾ ತಾಯಂದಿರಿಗೆ ಸಿಹಿ ಹಂಚುವ ಮುಖಾಂತರ ಅವರ ಆಶೀರ್ವಾದವನ್ನು ಪಡೆದರು.

ತಾಯಿಯೇ ಮೊದಲ ದೇವರು ತಾಯಿಯನ್ನು ಕಾಪಾಡುವಲ್ಲಿ ಪಿ‌ ಜಿ ಆರ್ ಎಸ್ ಎಸ್ ನ ಎಲ್ಲಾ ಅಧ್ಯಕ್ಷರು ಮತ್ತು ನಿರ್ದೇಶಕರು ಶ್ರಮಿಸುತ್ತಿದ್ದಾರೆ ಎಂದು ಧನ್ಯವಾದಗಳನ್ನು ತಿಳಿಸಿದರು.

ಮುಂದಿನ ದಿನದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಹೆಚ್ಚಿನ ರೀತಿಯಲ್ಲಿ ಆಶ್ರಮಕ್ಕೆ ಸಹಕಾರ ನೀಡುತ್ತೇವೆ ಎಂದು ಸ್ವಾತಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಮಂಜುಳಾ, ರಾಜ್ಯ ಸಂಚಾಲರಾದ ರಕ್ತದಾನಿ ಮಂಜು,ಚೈತ್ರ, ಹರಿಣಿ ಮತ್ತು ತಾಯಂದಿರು ಉಪಸ್ಥಿತರಿದ್ದರು.