ಸಾಲ ತೀರಿಸಲಾಗದೆ ಡೆತ್ ನೋಟ್‌ ಬರೆದಿಟ್ಟು ವ್ಯಕ್ತಿ ನಾಪತ್ತೆ

Spread the love

ಮೈಸೂರು: ಸಾಲ ತೀರಿಸಲು ಸಾದ್ಯವಾಗದೆ ಮನೆ ಬಿಟ್ಟು ಹೋಗುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಕಾಣೆಯಾಗಿರುವ ಘಟನೆ ಮೈಸೂರಿನ ಶಾರದಾದೇವಿ ನಗರದಲ್ಲಿ ನಡೆದಿದೆ.

ರಾಜೇಶ್ ಎಂಬವರು ಡೆತ್ ನೋಟ್ ಬರೆದಿಟ್ಟು ಜನವರಿ 10 ರಂದು ನಾಪತ್ತೆಯಾಗಿದ್ದು,
ಪತಿಯನ್ನ ಹುಡುಕಿ ಕೊಡುವಂತೆ ಪತ್ನಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ.

ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಚೈತ್ರ ಅವರ ಪತಿ ರಾಜೇಶ್ ಎರಡು ವರ್ಷಗಳ ಹಿಂದೆ ಸಣ್ಣಪುಟ್ಟ ಸಾಲ ಮಾಡಿಕೊಂಡಿದ್ದು ಮನೆ ಬಿಟ್ಟು ಓಡಿಹೋಗಿದ್ದರು.ಸಾಕಷ್ಟು ಹುಡುಕಾಡಿದ ನಂತರ ರಾಜೇಶ್ ಪತ್ತೆಯಾಗಿದ್ದರು.

ಸಾಲದ ಬಗ್ಗೆ ಯೋಚನೆ ಮಾಡದಂತೆ ಪತ್ನಿ ಚೈತ್ರ ಧೈರ್ಯ ತುಂಬಿದ್ದರು.ಆದರೆ ಮತ್ತೆ ರಾಜೇಶ್ ಮನೆ ಬಿಟ್ಟು ಹೋಗಿದ್ದಾರೆ,ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಚೀಟಿ ಬರೆದಿಟ್ಟಿರುವುದರಿಂದ ಪತ್ನಿ ಚೈತ್ರ ಹಾಗೂ ಕುಟುಂಬದವರು ಕಂಗಾಲಾಗಿದ್ದಾರೆ.