ಪೆಂಗಲ್ ಚಂಡಮಾರುತ;ಶಾಲಾ, ಕಾಲೇಜಿಗೆ ಡಿ.5 ರ ತನಕ ರಜೆ ಘೋಷಿಸಲು ತೇಜಸ್ವಿ ಮನವಿ

Spread the love

ಮೈಸೂರು: ಪೆಂಗಲ್ ಚಂಡಮಾರುತದಿಂದ ಸಾಕಷ್ಟು ಹಾನಿಗಳಾಗುತ್ತಿದ್ದು,ಮಕ್ಕಳ ಹಿತದೃಷ್ಟಿಯಿಂದ ಶಾಲಾ,ಕಾಲೇಜುಗಳಿಗೆ ಡಿಸೆಂಬರ್ 5 ರ ವರೆಗೂ ರಜೆ ಘೋಷಿಸಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಅವರಿಗೆ ಮನವಿ ಮಾಡಿರುವ ತೇಜಸ್ವಿ,ಸೋಮವಾರ ರಜೆ ಮಾಡಿರುವುದು ಸ್ವಾಗತಾರ್ಹವಾಗಿದೆ,ಆದರೆ ಮಳೆ ಇನ್ನೂ ಮುಂದುವರಿಯಲಿರು ವುದರಿಂದ ರಜೆಯನ್ನು ಐದರವರೆಗೂ ವಿಸ್ತರಿಸಬೇಕೆಂದು ಕೋರಿದ್ದಾರೆ‌.

ಈಗಾಗಲೇ ಹವಾಮಾನ ಇಲಾಖೆ ಮೈಸೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಚಳಿ ಮತ್ತು ನಿರಂತರ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿದ್ದು,ಯಲ್ಲೊ ಅಲರ್ಟ್ ಘೋಷಿಸಲಾಗಿದೆ.

ಮಂಜು ಕವಿದ ವಾತಾವರಣ ತೀವ್ರ ಸ್ವರೂಪದ ಚಳಿ ಇರುವುದರಿಂದ ವಿದ್ಯಾರ್ಥಿಗಳು‌ ಅದರಲ್ಲೂ ಪುಟ್ಟ ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು ಸಮಸ್ಯೆ ಉಂಟಾಗುತ್ತಿದೆ.

ಪೋಷಕರು ಆತಂಕ್ಕೆ ಒಳಗಾಗಿದ್ದಾರೆ
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲೆಯಲ್ಲೂ ಕೂಡ ಶಾಲಾ ಕಾಲೇಜುಗಳಿಗೆ ಡಿ.5 ರ ತನಕ ರಜೆ ಘೋಷಿಸಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.