ಮೈಸೂರು: ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಪವಿತ್ರೋತ್ಸವ ವಿಶೇಷ ಪೂಜಾ ಮಹೋತ್ಸವವ ನಡೆಯುತ್ತಿದೆ.
ಪ್ರಸ್ತುತ ಬಾದ್ರಪದ, ಶುಕ್ಲ ಏಕಾದಶಿಯಿಂದ ಆರಂಭವಾದ ಈ ವಿಶೇಷ ಮಹೋತ್ಸವ ಕೃಷ್ಣ ದ್ವಿತೀಯವರೆಗೂ ಸ್ವಾಮಿಯ ಸನ್ನಿಧಾನದಲ್ಲಿ ಜರುಗಿತ್ತದೆ.

ಪವಿತ್ರ ಎಂದರೇ ಶುದ್ದವಾಗಿರುವುದು, ಉತ್ಸವ ಎಂದರೇ ಹಬ್ಬ, ಹೆಸರಲ್ಲೇ ತಿಳಿಸಿರುವಂತೆ ಲೋಕದಲ್ಲಿ ಇರುವಂತಹ ದುಷ್ಟಶಕ್ತಿಗಳು ಯಾವುದಾದರೂ ಪಾತಕಾದಿಗಳು ಜರುಗಿದ್ದಲ್ಲಿ ಈ ಉತ್ಸವ ಆಚರಣೆಯಿಂದಾಗಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ದೇವಾಲಯದ ಆಡಳಿತಾಧಿಕಾರಿ ಶ್ರೀ ಎನ್.ಶ್ರೀನಿವಾಸನ್ ಅವರು.
ಈ ಉತ್ಸವ ಉಲ್ಲೇಖ ನಮಗೆ ಅಗ್ನಿಪುರಾಣ ಹಾಗೂ ಗರುಡ ಪುರಾಣಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಪಂಚಾರಾತ್ರಗಮದಲ್ಲಿ ಪ್ರಸಿದ್ಧ ಸಂಹಿತೆಯಾದ ಜಯಕ್ಯ ಸಂಹಿತೆಯಲ್ಲಿ ಸರ್ವದೋಶ ನಿವಾರಣೆ ಈ ಉತ್ಸವದದಲ್ಲಿ ಪ್ರಮುಖ ಅಂಶವಾಗಿದೆ ಎಂದು ವಿವರಿಸಿದರು.
ಎಲ್ಲರಿಗೂ ಶಾಂತಿ, ಸಂತೋಷ, ಕಲ್ಯಾಣ ಲಭಿಸಲಿ ಎಂದು ಅವರು ಹಾರೈಸಿದ್ದಾರೆ.