ಸೈನಿಕರಂತೆ ಕೆಲಸ ನಿರ್ವಹಿಸುವ ಪತ್ರಿಕಾ ವಿತರಕರು-ನಾರಾಯಣಗೌಡ

ಮೈಸೂರು: ಬಿಸಿಲು, ಮಳೆ,ಗಾಳಿ, ಚಳಿ ಲೆಕ್ಕಿಸದೆ ಹಗಲು ರಾತ್ರಿ ವರ್ಷವಿಡಿ ಕೆಲಸ ನಿರ್ವಹಿಸುವ ಯೋಧರಂತೆ ಪತ್ರಿಕಾ ವಿತರಕರದು ಕೂಡ ತ್ಯಾಗದ ಕಾರ್ಯ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಶ್ಲಾಘಿಸಿದರು.

ನಗರದ ಚಾಮುಂಡಿಪುರಂನಲ್ಲಿ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಪತ್ರಿಕಾ ವಿತರಕರ ದಿನದ ಅಂಗವಾಗಿ ಹಿರಿಯ ಪತ್ರಿಕಾ ವಿತರಕರಾದ
ಓಂದೇವ,ಜವರಪ್ಪ, ನಾಗೇಶ್ ಕಾವ್ಯ ಪ್ರಿಯ, ಎಂ ಪಿ ಗುಂಡಪ್ಪ, ಶ್ರೀಕಾಂತ್, ಅವರನ್ನು ಸನ್ಮಾನಿಸಿ ಗೌರವ ಧನ ನೀಡಿ
ಮಾತನಾಡಿದರು.

ಮಾಜಿ ಪ್ರಧಾನಿ ಅಬ್ದುಲ್ ಕಲಾಮ್ ಅವರು ಸಹ ಪತ್ರಿಕಾ ವಿತರಕರಾಗಿ ಮೇಲ್ಮಟ್ಟಕ್ಕೆ ಬಂದವರು, ,ಪತ್ರಿಕಾ ವಿತರಕರನ್ನು ಕೀಳಾಗಿ ಕಾಣಬಾರದು, ವಿತರಕರು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ, ವಾಹನಗಳಿಂದ ಪತ್ರಿಕೆಗಳ ಬಂಡಲ್ ಗಳನ್ನು ಇಳಿಸಿಕೊಳ್ಳಲು, ವಿತರಕರಿಗೆ ಹಾಗೂ ಪತ್ರಿಕೆ ಹಾಕುವ ಹುಡುಗರಿಗೆ ಹಂಚಲು ಕಷ್ಟವಾಗುತ್ತದೆ ,ಸ್ವಲ್ಪ ಮಳೆ ಹನಿ ಬಿದ್ದರೂ ಪತ್ರಿಕೆ ಹಾಳಾಗುತ್ತದೆ ,ಆದ್ದರಿಂದ ಪತ್ರಿಕೆಗಳ ಹಂಚಿಕೆಗೆ ಮೈಸೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮೈಸೂರು ನಗರ ಪಾಲಿಕೆ ಶಾಶ್ವತವಾದ ಜಾಗ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಮೈಸೂರಿನ ವಸ್ತುಪ್ರದರ್ಶನ ಆವರಣ ಅಥವಾ ಟೌನ್ ಹಾಲ್ ಸೇರಿದಂತೆ ಇನ್ನಿತರ ಯಾವುದಾದರೂ ಸ್ಥಳದಲ್ಲಿ ಪತ್ರಿಕಾ ವಿತರಕರಿಗೆ ಶಾಶ್ವತ ಸ್ಥಳಾವಕಾಶವನ್ನು ಮೈಸೂರು ನಗರಪಾಲಿಕೆ ಮಾಡಿಕೊಡಬೇಕು ಹಾಗೂ ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದು ನಾರಾಯಣಗೌಡ ಕೋರಿದರು.

ಪತ್ರಿಕ ವಿತರಕರ ಸಂಘದ ಕಾರ್ಯದರ್ಶಿ ರವಿ,ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಮೇಶ್ ರಾಮಪ್ಪ, ಎಸ್ ಎನ್ ರಾಜೇಶ್, ಲೋಕೇಶ್, ದಿನೇಶ್ ಮತ್ತಿತರರು ಹಾಜರಿದ್ದರು.