ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿ: ಪತ್ರ ಬರಹಗಾರರಿಗೆ ವಿಜಯಲಕ್ಷ್ಮಿ ಕಿವಿ ಮಾತು

Spread the love

ಮೈಸೂರು: ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಮತ್ತು ಇಲಾಖೆಗೆ ಹೆಚ್ಚು ರಾಜಸ್ವ ಬರುವ ಹಾಗೆ ಕೆಲಸ ಮಾಡುವಂತೆ ಪತ್ರ ಬರಹಗಾರರಿಗೆ ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಆರ್ ಇನಾಂದಾರ್ ಕಿವಿಮಾತು ಹೇಳಿದರು.

ಮೈಸೂರು ನಗರ ಮತ್ತು
ತಾಲ್ಲೂಕು ಪತ್ರಗಾರರ ಒಕ್ಕೂಟ ಸಂಘವನ್ನು ಉದ್ಘಾಟಿಸಿ ವಿಜಯಲಕ್ಷ್ಮಿ ಆರ್ ಇನಾಂದಾರ್ ಮಾತನಾಡಿದರು.

ಪತ್ರ ಬರಹಗಾರರ ಸಂಘ ನೋಂದಣಿ ಮಾಡಿದ್ದು ನನಗೆ ಸಂತೋಷವಾಗಿದೆ ಆದರೆ ನೀವು ತಡ ಮಾಡಿದಿರಿ, ನಿಮ್ಮ ಸಂಘಕ್ಕೆ ಒಳ್ಳೆಯದಾಗಲಿ ಎಂದು ‌ಶುಭ ಕೋರಿದರು.

ಕಾನೂನು ಚೌಕಟ್ಟಿನಲ್ಲಿ ಪತ್ರ ಬರೆಯಬೇಕಾದರೆ ಸರಿಯಾಗಿ ತಿಳಿದುಕೊಂಡು ಬರೆಯಬೇಕು ಇಂತಹ ಪತ್ರವನ್ನು ಖರೀದಿ ಮಾಡಿದ ವ್ಯಕ್ತಿಗೆ ಮುಂದೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಆಗ ಬಹಳ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಯಾವುದೇ ಹೊಸ ಡಾಕ್ಯುಮೆಂಟ್ ಬಂದರು ಅದರ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು, ನೀವು ಇಲಾಖೆಯ ಭಾಗವಾಗಿ ಕೆಲಸ ಮಾಡುವುದರಿಂದ ಸ್ಟ್ಯಾಂಪ್ ಡ್ಯೂಟಿಯನ್ನು ತಿಳಿದುಕೊಳ್ಳಿ ಎಂದು ತಿಳಿಸಿದರು.

ನಿಮ್ಮಲ್ಲಿ ಬಹಳ ಹಿರಿಯರು ಇದ್ದೀರಿ ಅವರಿಗೆ ಇದರ ಬಗ್ಗೆ ಅರಿವಿರುತ್ತದೆ ಆದರೆ ಹೊಸದಾಗಿ ಬಂದಿರುವವರು ರಿಜಿಸ್ಟ್ರೇಷನ್ ರೂಲ್ಸ್ ಬಗ್ಗೆ ಮತ್ತು ಸ್ಟ್ಯಾಂಡ್ ಬ್ಯೂಟಿ ಬಗ್ಗೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರಿನಲ್ಲಿ ಬಹಳ ಹಿರಿಯ ಅಧಿಕಾರಿಗಳು ಇದ್ದಾರೆ ಅವರು ನಿಮಗೆ ತಿಳುವಳಿಕೆ ನೀಡುತ್ತಾರೆ ಮತ್ತು ನಿಮಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ ಎಂದು ವಿಜಯಲಕ್ಷ್ಮಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ನಗರ ಮತ್ತು ತಾಲ್ಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷರಾದ ನಿಸಾರ್ ಅಹಮದ್ ಖಾನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ
ಮೈಸೂರು ಪೂರ್ವ ಹಿರಿಯ ಉಪ ನೋಂದಣಾಧಿಕಾರಿಗಳು ನಾಗರಾಜ್ ಎಚ್ ಜೆ, ಮೈಸೂರು ಉತ್ತರ
ಹಿರಿಯ ಉಪನೋಂದಣಾಧಿಕಾರಿಗಳು ನಂದಿನಿ ಸಿ.ಪಿ, ಮೈಸೂರು ದಕ್ಷಿಣ ಹಿರಿಯ ಉಪನೋಂದಣಾಧಿಕಾರಿಗಳು ಷಾಜಹ ಎಸ್. ಕೆ,
ಉಪನೋಂದಣಾಧಿಕಾರಿಗಳು ಮೈಸೂರು ಪಶ್ಚಿಮ ಶ್ರೀಕಾಂತ್ ಎನ್,ಉಪನೋಂದಣಾಧಿಕಾರಿಗಳು ಮೈಸೂರು ದಕ್ಷಿಣ ಯಶಸ್ವಿನಿ ಜೆ, ಮುಡ ಉಪನೋಂದಣಾಧಿಕಾರಿಗಳು ರುಕ್ಮಿಣಿ ವಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೋಡಲ್ ಆಫೀಸರ್ ಸಂತೋಷ್ ಕುಮಾರ್ ಎಂ, ವಿವೇಕ್ ಎಂ, ಹಾಗೂ ಒಕ್ಕೂಟದ ಉಪಾಧ್ಯಕ್ಷರಾದ ಎಂ ಎಸ್ ಧನಂಜಯ್, ಕಾರ್ಯದರ್ಶಿ ಕೆ ಆರ್ ಉದಯ್ ಕುಮಾರ್, ಖಜಾಂಚಿ ಎಂ ಎಸ್ ನರಸಿಂಹಮೂರ್ತಿ , ಸಂಚಾಲಕ ಎಂ ಗಣೇಶ್, ನಿರ್ದೇಶಕರುಗಳಾದ ಕೆ ಆರ್ ಸತ್ಯನಾರಾಯಣ್, ಎಸ್ ಎನ್ ದೇವರಾಜು, ನಾಗಭೂಷಣ್ ಆರಾಧ್ಯ ಎ. ಎಸ್, ಮಹದೇವ ಜಿ, ಬಿ ಕುಮಾರ್, ಫಣಿರಾಜ್ ಎಸ್,ಚಂದ್ರಶೇಖರ್, ಎಸ್.
ಎನ್. ದಿನೇಶ್ ಕುಮಾರ್,
ಎಸ್.ಎಸ್. ವೇಣು,ಜಯಲಕ್ಷ್ಮಿ ಬಿ.
ಮತ್ತಿತರರು ಹಾಜರಿದ್ದರು.