ಅದ್ದೂರಿಯಾಗಿ ನೆರವೇರಿದ ಶ್ರೀ ಪಾರ್ವತಿ ದೇವಿಯ 9ನೆ ವಾರ್ಷಿಕೋತ್ಸವ

 

ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಡಾ. ಅಣ್ಣಾಜಪ್ಪನವರ ನವಗ್ರಹ ಶ್ರೀ ಮೃತ್ಯುಂಜಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿ ದೇವಿಯ 9 ನೆ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಅದ್ದೂರಿಯಾಗಿ ನೆರವೇರಿತು.

ಮುಂಜಾನೆ 6.30ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ನಂತರ ಗಣಪತಿ ಹೋಮ, ನವಗ್ರಹ ಹೋಮ ಮೃತ್ಯುಂಜಯ ಹೋಮ, ಪಾರ್ವತಿ ದೇವಿ ದುರ್ಗಾ ಹೋಮ ಹಮ್ಮಿಕೊಳ್ಳಲಾಯಿತು.

ತದನಂತರ ಪೂರ್ಣಾವತಿ ಮಾಡಲಾಯಿತು, ಕುಂಭಾಭಿಷೇಕದ ನಂತರ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಯಿತು.

ನೂರಾರು ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. ದೇವಾಲಯದ ವ್ಯವಸ್ಥಾಪಕರಾದ ಶಿವಾರ್ಚಕ ಎಸ್. ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ಮತ್ತಿತರರ ನೇತೃತ್ವದಲ್ಲಿ ಪುಜಾ ಕಾರ್ಯಗಳು ನೆರವೇರಿತು.

ಪಾರ್ವತಿ ತಾಯಿಗೆ ನೀಲಿ ಬಣ್ಣದ ಸೀರೆ ಉಡಿಸಿ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.ಇಡೀ ದೇಸ್ಥನ ವನ್ನು ತಳಿರು ತೋರಣ,ಹೂವಿನ ಹಾರದಿಂದ ಅಲಂಕರಿಸಿದ್ದು‌ ವಿಶೇಷವಾಗಿತ್ತು.