ಪಾರ್ಕ್ ಗಳನ್ನ ಅಭಿವೃದ್ಧಿ ಪಡಿಸಿ; ಪುಂಡರ ಹಾವಳಿ ತಪ್ಪಿಸಿ-ಶ್ರೀ ವತ್ಸ‌ ಸೂಚನೆ

Spread the love

ಮೈಸೂರು:ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸಿ ಇಲ್ಲಿಗೆ ಬರುವ ಪುಂಡರ ಹಾವಳಿ ತಪ್ಪಿಸಿ ಎಂದು ಅಧಿಕಾರಿಗಳಿಗೆ ಶಾಸಕ ಟಿ.ಎಸ್.ಶ್ರೀ ವತ್ಸ‌ ಸೂಚಿಸಿದರು.

ವಾರ್ಡ್ ನಂಬರ್ 61ರ ಸುತ್ತಮುತ್ತ ವಿದ್ಯಾರಣ್ಯಪುರಂ ಭಾಗಗಳಲ್ಲಿ ಇಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ ರವರು ಅಧಿಕಾರಿಗಳೊಂದಿಗೆ ಪಾದಯಾತ್ರೆ ಮಾಡಿ ಸ್ಥಳೀಯರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಿದರು.

ಉದ್ಯಾನವನಗಳ ಸುತ್ತ ಗಿಡಗಳನ್ನು ಹಾಕಿಸುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವುದರ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಹಾಗೂ ರಾತ್ರಿಯ ಸಮಯದಲ್ಲಿ ಪುಂಡ ಹುಡುಗರು ಮಧ್ಯಪಾನ ಮಾಡುತ್ತಿದ್ದಾರೆ ಎಂದು ಶಾಸಕರಿಗೆ ಸ್ಥಳೀಯ ನಿವಾಸಿಯಾದ ರಂಗರಾಜುರವರು ದೂರಿದರು.

ಮತ್ತೊಬ್ಬ ನಿವಾಸಿ ಪದ್ಮಮ್ಮನವರು ನಗರಪಾಲಿಕೆ ವತಿಯಿಂದ ಇರುವ ಮಳಿಗೆಗಳು ಶಿಥಿಲವಾಗಿದ್ದು, ಈ ಜಾಗಗಳಲ್ಲಿ ಪುಂಡ ಯುವಕರು ಅಸಭ್ಯ ವರ್ತನೆ ಮಾಡುತ್ತಾರೆ ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪಾದಯಾತ್ರೆ ಸಂಧರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ,ಇಂಜಿನಿಯರ್ ಚೇತನ್,ಅರೋಗ್ಯಾಧಿಕಾರಿ ಶಿವಪ್ರಸಾದ್,ಶಾಸಕರ ಅಪ್ತ ಸಹಾಯಕ ಆದಿತ್ಯ, ವಾರ್ಡ ಉಸ್ತುವಾರಿ ಜೋಗಿಮಂಜು,ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್,ಶಿವಲಿಂಗ ಸ್ವಾಮಿ,
ಕಿಶೋರ್ ,ವಾಸು,ಶ್ರೀಧರ ಭಟ್,
ಮಹದೇವ್,ಮಂಗಳ,ಮಹದೇವಣ್ಣ,ಕಿಶೋರ್, ಪ್ರದೀಪ್,ಮತ್ತಿತರರು ಹಾಜರಿದ್ದರು.