ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಸೇವಾ ಪಾಕ್ಷಿಕವನ್ನು ಹಮ್ಮಿಕೊಂಡು ಶ್ರಮಾದಾನ ಮಾಡಿದರು.
ಭಾನುವಾರ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವಾರ್ಡ್ 46ರಿಂದ ರಾಮಕೃಷ್ಣನಗರದ ‘ಐ’ ಬ್ಲ್ಯಾಕಿನಲ್ಲಿ ಬಿಜೆಪಿ ಸ್ಥಳೀಯ ಕಾರ್ಯಕರ್ತರು, ನಿವಾಸಿಗಳು ಹಾಗೂ ಪಾಲಿಕೆ ಪೌರಕಾರ್ಮಿಕರ ಸಹಯೋಗದಲ್ಲಿ ಉದ್ಯಾನವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಡಲಾಯಿತು.

ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಪ್ರಧಾನ ಕಾರ್ಯದರ್ಶಿ ಆರ್ ಸೋಮಶೇಖರ್, ವಾರ್ಡ್ ಅಧ್ಯಕ್ಷ ಬಸವಣ್ಣ, ಮಂಡಲ ಉಪಾಧ್ಯಕ್ಷ ಹಿರಿಯಣ್ಣ, ಎಸ್ ಸಿ ಮೋರ್ಚಾ ನಗರ ಉಪಾಧ್ಯಕ್ಷ ಎನ್.ಪ್ರತಾಪ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶುಭಶ್ರೀ, ಮುಖಂಡರಾದ ಗಿರೀಶ್, ಸ್ಥಳೀಯ ನಿವಾಸಿಗಳಾದ ನಿವೃತ್ತ ಅರಣ್ಯಧಿಕಾರಿ ಅಂಬಾಡಿ ಮಹದೇವ್, ಚಂದ್ರಶೇಖರ್, ಪಂಕಜವಲ್ಲಿ, ರೇಚಣ್ಣ, ಸ್ವಾಮಿ ಗೌಡ, ಬಾಲಕೃಷ್ಣ ಭಟ್ ಭಾಗವಹಿಸಿ ಶ್ರಮದಾನ ಮಾಡಿದರು.