ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ವಿದ್ಯಾರ್ಥಿಗಳು ತಾಯಂದಿರು ಹಾಗೂ ಶಿಕ್ಷಕರಿಗೆ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು.
ಅದಕ್ಕೂ ಮುನ್ನ ಸರಸ್ವತಿ ಪೂಜೆ ಮಾಡಿ ನಮಿಸಿದರು.
ನಂತರ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಪರೀಕ್ಷಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಮಾಜ ಸೇವಕಿ ಖುಷಿ ವಿನು ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರವೂ ಮುಖ್ಯ, ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದರಷ್ಟೇ ಸಾಲದು ಮುಖ್ಯವಾಗಿ ಸಮಾಜ ಹಾಗೂ ಕುಟುಂಬದಲ್ಲಿ ಹೇಗೆ ಹೊಂದಾಣಿಕೆಯಿಂದ ಸಾಗಬೇಕು ಎಂಬುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಮನುವರಿಕೆ ಮಾಡಲು
ಅಕ್ಕನ ಬಳಗ ಶಾಲೆ ಶಿಕ್ಷಕ ವೃಂದ ಮಕ್ಕಳು ಪರೀಕ್ಷೆ ಬರೆಯುವ ಮುನ್ನ ತಾಯಂದರಿಗೆ ಹಾಗೂ ಶಿಕ್ಷಕರಿಗೆ ಪಾದಪೂಜೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸಂಧ್ಯಾ, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಮಹಾನ್ ಶ್ರೇಯಸ್, ದುರ್ಗಾ ಪ್ರಸಾದ್, ಐಶ್ವರ್ಯ, ಹೇಮಾ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.