ಮೈಸೂರು: ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ
ಪವಮಾನ ಹೋಮವನ್ನು ನೆರವೇರಿಸಲಾಯಿತು.
ಶನಿವಾರ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಹ ಅಲಂಕಾರ ಮಾಡಿ ಲೋಕಕಲ್ಯಾಣಾರ್ಥ ಅಂಗವಾಗಿ ವಿಶೇಷವಾಗಿ ಪವಮಾನ ಹೋಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಶಿವಮೊಗ್ಗದ ವಿಮಲ್ ಹಾಗೂ ಕುಟುಂಬದವರು ಮತ್ತು
ಕ್ಯಾಲಿಫೋರ್ನಿಯದ ಶ್ರೀನಿವಾಸ್ ಹಾಗೂ ಮೈತ್ರಿ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.