ಮೈಸೂರು: ಪಂಡಿತ ಪಂಚಾಕ್ಷರ ಗವಾಯಿಗಳಿಗೂ ಮೈಸೂರಿಗೂ ವಿಶೇಷವಾದ ಸಂಬಂಧವಿದೆ ಎಂದು ಸಂಗೀತಾ ವಿದ್ಯಾಶಾಲೆಯ ಮುಖ್ಯಸ್ಥರು ಹಾಗೂ ತಬಲಾ ವಾದಕ ಭೀಮಾಶಂಕರ್ ಬೀದನೂರ್ ಅವರು ತಿಳಿಸಿದರು.
ಮೈಸೂರಿನ ಕುವೆಂಪು ನಗರದ ಉದಯರವಿ ರಸ್ತೆಯಲ್ಲಿರುವ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ಎಸ್. ಜಿ. ಪಿ ಸಂಗೀತ ವಿದ್ಯಾಲಯದಲ್ಲಿ ಪಂ. ಪಂಚಾಕ್ಷರ ಗವಾಯಿಗಳ 133 ನೇ ಜಯಂತಿ ಹಾಗೂ ಪದ್ಮಭೂಷಣ ಉಸ್ತಾದ್ ಜಾಕೀರ್ ಹುಸೇನ್ ಅವರಿಗೆ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ ರು.
ಗವಾಯಿಗಳು ಮೈಸೂರಿನಲ್ಲಿ ತಮ್ಮ ಸಂಗೀತ ಅಭ್ಯಾಸ ಮಾಡಿದ್ದರು ಇಂದು ಅವರಿಗೆ ಲಕ್ಷಾಂತರ ಸಂಗೀತ ವಿದ್ಯಾರ್ಥಿಗಳು ಇದ್ದಾರೆ. ಸಂಗೀತ ಅಭ್ಯಾಸ ಮಾಡುವವರಿಗೆ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜು ಗವಾಯಿಗಳು ಸದಾ ಸ್ಪೂರ್ತಿ ಎಂದು ತಿಳಿಸಿದರು
ಗವಾಯಿಗಳು ನಮ್ಮ ಸಂಗೀತದ ಸ್ವರಗಳಲ್ಲಿ ಜೀವಂತವಿದ್ದಾರೆ. ಮೈಸೂರಿನ ಮತ್ತು ಪಂಚಾಕ್ಷರಿ ಗವಾಯಿಗಳ ಭಾಂದವ್ಯ ಮುಂದಿನ ಪೀಳಿಗೆಗೆ ಪರಿಚಯಿಸುವ ದೂರದೃಷ್ಟಿಯಿಂದ ಮೈಸೂರಿನ ಯಾವುದಾದರೂ ವೃತ್ತಕ್ಕೆ ಅಥವಾ ರಸ್ತೆಗೆ ಅವರ ಹೆಸರನ್ನು ಇಟ್ಟು ಅವರ ಮೈಸೂರಿನ ನಂಟನ್ನು ಚಿರಸ್ಥಾಯಿಯಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಜಾಕಿರ್ ಹುಸೇನ್ ಅವರ ಶಿಷ್ಯ ವೃಂದದ ವಿನಾಯಕ್ ಸಾಗರ್ ಮಾತನಾಡಿ ತಬಲಾ ವಾದನದಲ್ಲಿ ಜಾಕಿರ್ ಹುಸೇನ್ ಅವರ ಸಾಧನೆ ಅಪಾರ ಎಂದು ಬಣ್ಣಿಸಿದರು.
ಇಂದು ಪ್ರಪಂಚದಾದ್ಯಂತ ಭಾರತದ ತಬಲಾ ಮಾನ್ಯತೆ ಪಡೆದಿದೆ ಅದರ ಆಸಕ್ತರು ವೃದ್ದಿಯಾಗುತ್ತಿದ್ದಾರೆ ಎಂದರೆ ಅದರ ಬಹುಪಾಲು ಕೀರ್ತಿ ಜಾಕಿರ್ ಹುಸೇನ್ ರವರಿಗೆ ಸೇರುತ್ತದೆ ಎಂದು ತಿಳಿಸಿದರು.
ಈ ವೇಳೆ ವಿನಾಯಕ ಸಾಗರ್ ಒಂದು ಗಂಟೆಗಳ ಕಾಲ ನಿರಂತರ ತಬಲ ವಾದನ ಮಾಡಿ ಜಾಕಿರ್ ಹುಸೇನ್ ಅವರಿಗೆ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು.
ಎಸ್ ಜಿ ಪಿ ಸಂಗಿತಾ ವಿದ್ಯಾಲಯದ ವಿದ್ಯಾರ್ಥಿಗಳಾದ ಬಾಲ ಕಲಾವಿದ ಕು. ಪುಟ್ಟರಾಜ್ ಕೊಲ್ಕುಂದ ಹಿಂದೂ ಸ್ಥಾನಿ ಗಾಯನ ಮಾಡಿದರೆ ಯಮನೇಶ್ ತಬಲಾ ವಾದನ ಮಾಡಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಡಿತ್ ರಮೇಶ್ ಕುಲ್ಕುಂದ, ವಿನಾಯಕ್ ಸಾಗರ್, ಭೀಮಾಶಂಕರ ಬೀದನೂರ್ ಸೇರಿದಂತೆ ವಿದ್ಯಾಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.