ವಿಜೃಂಭಣೆಯಿಂದ ನೆರವೇರಿದಶ್ರೀ ಪಂಚ ಶನೇಶ್ಚರ ಸ್ವಾಮಿ ಆರಾಧನಾ ಮಹೋತ್ಸವ,ಹುತ್ತೂರಮ್ಮ ಜಾತ್ರೆ

Spread the love

ಮೈಸೂರು: ಶ್ರೀ ಪಂಚ ಶನೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ಮತ್ತು ಮಲಯಾಳದ ಹುತ್ತೂರಮ್ಮ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ
ನೆರವೇರಿತು.

ಮೈಸೂರಿನ ಸಿದ್ದಾರ್ಥ ಲೇಔಟ್ ಕಮಾನ್ ಗೇಟ್ ಬಳಿ ಇರುವ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಮುಂಬಾಗದ ಆವರಣದಲ್ಲಿ 33ನೆ‌ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಮೈಸೂರಿನ ಸುತ್ತಮುತ್ತಲ ಹಳ್ಳಿಗಳಿಂದ 64 ಕೂಟಗಳು ಅಲಂಕೃತವಾಗಿ ಹಸಿರು ಹೊಂಬಾಳೆ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗವನ್ನು ಹೊತ್ತು ಹಸಿರು ಹೂವಿನ ಮಂಟಪಕ್ಕೆ ದೇವರ ಉತ್ಸವ ತೆರಳಿತು.ಜಾನಪದ ಕಲಾತಂಡಗಳು ಉತ್ಸವದಲ್ಲಿ ಸಾಗಿ ಮೆರಗು ತಂದವು.

ಈ‌ ವೇಳೆ‌ ಮಕ್ಕಳ ಮುಡಿಗಳು, ನಾಮಕರಣಗಳು, ಸ್ತ್ರೀಯರ ಪಂಚಮುಡಿಗಳು ನಡೆದವು.

ಇದೇ ವೇಳೆ ಮಕ್ಕಳು ಆಲರವಿಯನ್ನು ಹೊತ್ತು ಹಸಿರು ಹೂವಿನ ಮಂಟಪಕ್ಕೆ ತೆರಳಿದರು. 10 ವರ್ಷದ ಒಳಗಿನ ಮಕ್ಕಳು ಕೂಡ ಕಳಸವನ್ನು ಹೊತ್ತು‌ ಸಾಗಿದ್ದು ವಿಶೇಷವಾಗಿತ್ತು.

ಮೆರವಣಿಗೆ ಸಿದ್ದಾರ್ಥ ಲೇಔಟ್ ಪಾಳ್ಯ ಸ್ಟಾಪ್ ಮಾರ್ಗವಾಗಿ‌ ಸಾಗಿ ಲಲಿತಮಹಲ್‌ ಗೇಟ್ ಮೂಲಕ ಬಂದು ಮುಖ್ಯ ರಸ್ತೆಯಲ್ಲಿ ಸಾಗಿತು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

ಮಧ್ಯಾಹ್ನ 1ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಪಂಚಶನೇಶ್ಚರಸ್ವಾಮಿ ಮಹಾ ಮಂಗಳಾರತಿಯನ್ನು ರಾತ್ರಿ ನೆರವೇರಿಸಲಾಯಿತು.