ಮೋದಿ ಹುಟ್ಟು ಹಬ್ಬ:ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು: ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಬೀರಿಹುಂಡಿ ಮಹಾಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬೋಗಾದಿ ರವಿಶಂಕರ್ ಲೇಔಟ್ ಉದ್ಯಾನವನದ ಬಳಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಇದೇ ವೇಳೆ ನಿವೃತ್ತ ಸೈನಿಕರಾದ ಕಿರಣ್,ಮಂಜು ಹಾಗೂ ಪ್ರೊ.ಶ್ರೀನಿವಾಸಯ್ಯ ಅವರುಗಳನ್ನು ಸನ್ಮಾನಿ ಸಲಾಯಿತು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಾಂತರ ಮಂಡಲ ಅಧ್ಯಕ್ಷ ಪೈಟಿ ರವಿ, ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್, ಚಿಕ್ಕನ್ಯ ಶಿವು, ಹಿರಿಯ ಮುಖಂಡರಾದ ಗೋಪಾಲ್ ರಾವ್, ಸುನಿಲ್, ಬೀರಿಹುಂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಡಿ, ಮಹದೇವಸ್ವಾಮಿ,ನಂದೀಶ್, ಲೋಕೇಶ್, ವಿನಯ್ ಕುಮಾರ್, ಮೋಹನ್, ಪರಶಿವಮೂರ್ತಿ, ವಿಜಯಕುಮಾರ್, ಶ್ರೀಕಾಂತ್ ಕಾವೇರಿ ಬಡಾವಣೆ, ರಾಮೇಗೌಡ, ಮಹಾಂತೇಶ್, ಯೋಗೇಶ್ ಸಾಲುಂಡಿ ಮತ್ತಿತರರು ಪಾಲ್ಗೊಂಡಿದ್ದರು.