ಮೈಸೂರು: ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಒಂದು ಋತು ಚಕ್ರ ರಜೆ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಶ್ರೀ ದುರ್ಗಾ ಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಸ್ವಾಗತಿಸಿದ್ದಾರೆ.
ರಾಜ್ಯ ಸರಕಾರಿ ಇಲಾಖೆ, ಖಾಸಗಿ ಕಚೇರಿ, ಗಾರ್ಮೆಂಟ್ಸ್ ಸೇರಿದಂತೆ ಸರಕಾರಿ, ಅನುದಾನಿತ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಿಗೊಮ್ಮೆ ಋತು ಚಕ್ರ ರಜೆ ನೀಡಲು ಸಂಪುಟದಲ್ಲಿ ನಿರ್ಧರಿಸಿರುವುದು ಮಹಿಳಾ ಸಬಲೀಕರಣ ಮತ್ತು ಮಾನವೀಯ ನೆಲೆಯಲ್ಲಿಸ್ವಾಗತಾರ್ಹವಾಗಿದೆ, ಇದರಿಂದ ಮಹಿಳೆಯರಲ್ಲಿ ಆತ್ಮಸ್ಥೆರ್ಯ ಇನ್ನಷ್ಟು ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರವಾಗಲಿ, ಸಮಾಜವಾಗಲಿ ಮಹಿಳೆಯರ ಆರೋಗ್ಯ, ಸಮಾನತೆ ಮತ್ತು ಸಬಲೀಕರಣದ ಬಗ್ಗೆ ತೋರುವ ಕಾಳಜಿ, ಜವಾಬ್ದಾರಿಯ ಪ್ರತೀಕವಾಗಿದ್ದು, ಇದನ್ನು ಇಡೀ ಮಹಿಳಾ ಸಮುದಾಯವು ಗೌರವಯುತ ಭಾವನೆಯಿಂದ ಸ್ವಾಗತಿಸಲಿದೆ. ಸರಕಾರದ ಈ ನಿರ್ಧಾರವು ಕೇವಲ ಆದೇಶಕ್ಕೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಜಾರಿ ಆಗಬೇಕು ಮತ್ತು ಬೇರೆ ಬೇರೆ ನೆಪವೊಡ್ಡಿ ಅದನ್ನು ತಡೆಯುವ ಮತ್ತು ಮಹಿಳೆ ಯರ ಈ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಆಗಬಾರದು ಎಂದು ರೇಖಾ ಶ್ರೀನಿವಾಸ್ ಮನವಿ ಮಾಡಿದ್ದಾರೆ.