ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಕೇಂದ್ರ ಸರ್ಕಾರ ಇಂದು (ಜನವರಿ 25) ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರ ಶನಿವಾರ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು 7 ಮಂದಿಗೆ ಪದ್ಮವಿಭೂಷಣ, 119 ಮಂದಿಗೆ ಪದ್ಮ ಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಅನಂತನಾಗ್ ನಟಿಸಿದ್ದು, ದಶಕಗಳಿಂದಲೂ ಸಿನಿಮಾ ಮೂಲಕ ಮನರಂಜನೆ, ಸಾಮಾಜಿಕ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ.
ರಿಕ್ಕಿ ಕೇಜ್ ಕನ್ನಡದ ಕೆಲವು ಸಿನಿಮಾ ಸೇರಿದಂತೆ ಹಲವು ಆಲ್ಬಂಗಳಿಗೆ ಸಂಗೀತ ನೀಡಿರುವ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ,
ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್,
ಹಿಂದಿ ಚಿತ್ರರಂಗದ ಜನಪ್ರಿಯ ನಟ, ನಿರ್ಮಾಪಕ, ನಿರ್ದೇಶಕ ಶೇಖರ್ ಕಪೂರ್
ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಹಿರಿಯ ನಟಿ ಶೋಭನಾಗೆ
ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಖ್ಯಾತ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್,ಖ್ಯಾತ ನಟಿ, ನೃತ್ಯಗಾರ್ತಿ ಮಮತಾ ಶಂಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಅದೇ ರೀತಿ ಕರ್ನಾಟಕದ ಜಾನಪಾದ ಗಾಯಕ ವೆಂಕಪ್ಪ ಅಂಬಾಜಿ,ತೊಗಲುಬೊಂಬೆ ಆಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ ಸೇರಿದಂತೆ 30 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಪ್ಯಾರಾಲಿಂಪಿಕ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾಲಿಂಪಿಯನ್ ಹರ್ವಿಂದರ್ ಸಿಂಗ್, ಬ್ರೆಜಿಲ್‌ನ ಹಿಂದು ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ, ಭಾರತದ ಪರಂಪರೆಯ ಬಗ್ಗೆ ನಿರಂತರವಾಗಿ ಬರೆದಿರುವ ಹಗ್ ಮತ್ತು ಕೊಲೀನ್ ಗ್ಯಾಂಟ್ಟರ್ ದಂಪತಿಗಳಿಗೂ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.
ಗರ್ಭಕಂಠದ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ವಿಶೇಷ ತಜ್ಞರಾಗಿರುವ ದೆಹಲಿಯ ಸ್ತ್ರೀರೋಗ ತಜ್ಞೆ ಡಾ. ನೀರ್ಜಾ ಭಟ್ನಾ, ಭೋಜ್‌ಪುರದ ಸಮಾಜ ಸೇವಕ ಭೀಮ್ ಸಿಂಗ್ ಭವೇಶ್, ದಕ್ಷಿಣ ಭಾರತೀಯ ಸಂಗೀತ ಮತ್ತು ಸಂಸ್ಕೃತಿಗೆ ಪ್ರಮುಖವಾದ ಶಾಸ್ತ್ರೀಯ ತಾಳವಾದ್ಯವಾದಲ್ಲಿ ಖ್ಯಾತಿ ಗಳಿಸಿರುವ ಪಿ. ದಚ್ಚನಮೂರ್ತಿ, ನಾಗಾಲ್ಯಾಂಡ್‌ನ ನೋಕ್ಲಾಕ್‌ನ ಹಣ್ಣಿನ ರೈತ ಎಲ್ ಹ್ಯಾಂಗ್ಲಿಂಗ್ ಕೂಡ ಪದ್ಮಶ್ರೀಗೆ ಭಾಜನರಾಗಿದ್ದಾರೆ.
ಗೋವಾ ಮೂಲದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ, ಪಶ್ಚಿಮ ಬಂಗಾಳದ ಧಕ್ ಆಟಗಾರ ಗೋಕುಲ್ ಚಂದ್ರ ದಾಸ್, ಕುವೈತ್‌ನ ಯೋಗ ಸಾಧಕಿ ಶೈಖಾ ಎ ಜೆ ಅಲ್ ಸಬಾ ಅವರಿಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.