ಮೈಸೂರು: ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ ಶ್ರೀರಾಮಪುರದಲ್ಲಿರುವ ಬೆಳಕು ವಾತ್ಸಲ್ಯದಾಮದ ತಾಯಂದರಿಗೆ ಮಾತೃವಂದನೆ ಮತ್ತು ಪಾದಪೂಜೆ ನೆರವೇರಿಸಲಾಯಿತು.
ತಾಯಂದಿರ ದಿನಾಚರಣೆ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಂಡು ನಂತರ ಹಣ್ಣು ಹಂಪಲು, ದಿನಿಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ
ಉದ್ಯಮಿ ಮಹದೇವ್ ಅವರು,
ಇಂದು ಇಡೀ ರಾಷ್ಟ್ರವು ತಾಯಂದಿರ ದಿನವನ್ನು ಆಚರಿಸುತ್ತಿದೆ.ನಾವು ನಮ್ಮನ್ನು ಜಗತ್ತಿಗೆ ಕರೆತಂದ ತಾಯಿಯನ್ನು, ಭೂಮಿ ತಾಯಿಯನ್ನು ಮತ್ತು ಪ್ರಕೃತಿಯನ್ನು ಪೂಜಿಸುತ್ತೇವೆ. ನಮ್ಮ ಎಲ್ಲಾ ತಾಯಂದಿರ ತ್ಯಾಗಗಳು ಮಾತ್ರ ನಾವು ಈಗ ನಿಂತಿರುವ ಸ್ಥಾನಕ್ಕೆ ನಮ್ಮನ್ನು ತಂದಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ರಾಮಪ್ಪ ರಮೇಶ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್ ,ಗಾಯಕ ಯಶ್ವಂತ್ ಕುಮಾರ್, ವೆಂಕಟೇಶ್ , ಹಿರಿಯ ಕ್ರೀಡಾಪಟು ಮಹಾದೇವ್, ರಾಜೇಶ್ ಕುಮಾರ್, ಮಹದೇವಸ್ವಾಮಿ,ಮಹೇಶ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ತೇಜಸ್,ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.
