ಆಪರೇಷನ್ ಸಿಂಧೂರ್ ಬರಿ ಟ್ರೇಲರ್:ಮುಂದೆ ಇದೆ ಸಿನೆಮಾ-ರಾಜನಾಥಸಿಂಗ್

Spread the love

ಭುಜ್: ಆಪರೇಷನ್ ಸಿಂಧೂರ್ ಬರಿ ಟ್ರೇಲರ್, ಮುಂದೆ ಇದೆ‌ ಪೂರಾ ಸಿನೆಮಾ, ಸಮಯ ಬಂದಾಗ ತೋರಿಸುತ್ತೇವೆ ಎಂದು
ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಪಾಕ್ ಗೆ‌ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅವರು ಶುಕ್ರವಾರ ಭುಜ್​ ವಾಯು ನೆಲೆಗೆ‌ ಭೇಟಿ ನೀಡಿದ ವೇಳೆ ಈ ಎಚ್ಚರಿಕೆ‌‌ ನೀಡಿದರು.

ಕಳೆದ ವಾರ ಪಾಕ್ ಸೇನೆಯು ಈ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿತ್ತು.ಆದರೆ ಈ ಯೋಜನೆಗಳನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿದ್ದವು.

ಈ ವೇಳೆ ರಾಜನಾಥ್ ಸಿಂಗ್ ಪಹಲ್ಗಾಮ್​ನಲ್ಲಿ ಸಾವನ್ನಪ್ಪಿದ್ದ ಮುಗ್ಧ ನಾಗರಿಕರು ಹಾಗೂ ಆಪರೇಷನ್ ಸಿಂಧೂರ್​ನಲ್ಲಿ ಹುತಾತ್ಮರಾದ ಸೈನಿಕರಿಗೆ ನಮನ ಸಲ್ಲಿಸಿದರು. ಈ ಭುಜ್ 1965 ಮತ್ತು 1971
ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ.

ಇಂದು ಮತ್ತೊಮ್ಮೆ ಈ ಭುಜ್ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ, ಅದರ ಮಣ್ಣಿನಲ್ಲಿ ದೇಶಭಕ್ತಿಯ ಪರಿಮಳವಿದೆ ಮತ್ತು ಇಲ್ಲಿನ ಸೈನಿಕರು ಭಾರತವನ್ನು ರಕ್ಷಿಸುವ ಅಚಲವಾದ ಸಂಕಲ್ಪವನ್ನು ಹೊಂದಿದ್ದಾರೆ. ವಾಯುಪಡೆಯ ಯೋಧರು ಸೇರಿದಂತೆ ಸಶಸ್ತ್ರ ಪಡೆಗಳು ಮತ್ತು ಬಿಎಸ್‌ಎಫ್‌ನ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ ಎಂದು ನುಡಿದರು‌